Select Your Language

Notifications

webdunia
webdunia
webdunia
webdunia

ನಿಮಗೆ ಲಾಕ್ ಡೌನ್ ಮುಂದುವರಿಯಬೇಕೇ? ಬೇಡವೇ?

ನಿಮಗೆ ಲಾಕ್ ಡೌನ್ ಮುಂದುವರಿಯಬೇಕೇ? ಬೇಡವೇ?
ಬೆಂಗಳೂರು , ಬುಧವಾರ, 29 ಏಪ್ರಿಲ್ 2020 (09:06 IST)
ಬೆಂಗಳೂರು: ಲಾಕ್ ಡೌನ್ 2 ನೇ ಹಂತ ಮುಕ್ತಾಯಕ್ಕೆ ಬಂದಿದೆ. ಈಗಾಗಲೇ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಲಾಕ್ ಡೌನ್ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದೆ.


ಇದರ ಬಗ್ಗೆ ಸಾರ್ವಜನಿಕರು ಏನು ಹೇಳುತ್ತಿದ್ದಾರೆ ಗೊತ್ತಾ?  ಸರ್ಕಾರಗಳೇನೋ ಲಾಕ್ ಡೌನ್ ಮುಂದುವರಿಯಲಿವೆ ಎನ್ನುತ್ತಿವೆ. ಆದರೆ ಜನರ ಅಭಿಪ್ರಾಯವೇನು?

ಸಾಮಾಜಿಕ ಜಾಲತಾಣಗಳ ಮೂಲಕ ಲಾಕ್ ಡೌನ್ ಮುಂದುವರಿಕೆ ಬಗ್ಗೆ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರಲ್ಲಿ ಹಲವರು ಕೊರೋನಾ ಇನ್ನಷ್ಟು ಹರಡದಂತೆ ಲಾಕ್ ಡೌನ್ ಮುಂದುವರಿಯಲಿ. ಆದರೆ ಕಟ್ಟು ನಿಟ್ಟಾಗಿ ಜಾರಿಯಾಗಲಿ ಎನ್ನುತ್ತಿದ್ದಾರೆ.

ಮತ್ತೆ ಕೆಲವರು ಲಾಕ್ ಡೌನ್ ಮುಂದುವರಿಯುವುದರಿಂದ ಕೊರೋನಾ ಏನೋ ನಿಯಂತ್ರಣಕ್ಕೆ ಬರಬಹುದು. ಆದರೆ ನೌಕರರ ಗತಿಯೇನು? ನಮ್ಮ ಕಂಪನಿಗಳು ಈ ರೀತಿ ಎರಡು ತಿಂಗಳು ಮುಚ್ಚಿದ್ದರೆ ನಮ್ಮನ್ನು ಕೆಲಸದಿಂದ ತೆಗೆದುಹಾಕಿದರೆ ನಮಗೆ ಕೆಲಸ ನೀಡುವವರು ಯಾರು? ಈಗಾಗಲೇ  ಇಷ್ಟು ದಿನ ಮನೆಯಲ್ಲೇ ಕೂತು ದುಡ್ಡಿಗಾಗಿ ಪರದಾಡುತ್ತಿದ್ದೇವೆ. ಇನ್ನಷ್ಟು ದಿನ ಹೀಗೆ ಮುಂದುವರಿದರೆ ನಮ್ಮ ಗತಿಯೇನು ಎಂದು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ಈ ಎರಡೂ ವರ್ಗಗಳ ಅಭಿಪ್ರಾಯ ಪರಿಗಣಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಸಮಸ್ಯೆಯಿದ್ದವರು ಮುಂಜಾನೆ ಬಿಸಿ ನೀರಿಗೆ ಉಪ್ಪು ಹಾಕಿ ಸ್ನಾನ ಮಾಡಿ!