Publish Date: Thu, 15 Jan 2026 (17:45 IST)
Updated Date: Thu, 15 Jan 2026 (17:47 IST)
ಬೆಂಗಳೂರು: ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದಲ್ಲಿ ನಡೆದ ಬಾಲಕ ಸುಮಂತ್ (15) ನಿಗೂಢ ಸಾವಿನ ಪ್ರಕರಣ ಇದೀಗ ಹೊಸ ತಿರುವು ಪಡೆದಿದೆ. ಇದೀಗ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಇದೊಂದು ಕೊಲೆ ಎಂದುಅನುಮಾನಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಕೆರೆಯಲ್ಲಿ ಸಿಕ್ಕಿದ ಕತ್ತಿ ಮತ್ತು ಟಾರ್ಚ್ ಲೈಟ್ ತನಿಖೆಗೆ ತಿರುವು ನೀಡಿದೆ, ಹಾಗೂ ಈ ಪ್ರಕರಣದ ತನಿಖೆಗೆ ಡಿವೈಎಸ್‌ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.
ಏನಿದು ಪ್ರಕರಣ: ಓಡಿಲ್ನಾಳ ಗ್ರಾಮದ ಸಂಬೋಳ್ಯದ ಸುಮಂತ್ ಎಂಬ ಬಾಲಕನ ಶವ ಕೆರೆಯಲ್ಲಿ ಪತ್ತೆಯಾಗಿದೆ. ಇದೀಗ ಮರಣೋತ್ತರ ತನಿಖೆಯಲ್ಲಿ ಮೃತ ಬಾಲಕ ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತವಾಗಿದ್ದ, ಮತ್ತು ತಲೆ ಮೇಲೆ ಗಾಯಗಳಾಗಿದ್ದು, ತಕ್ಷಣದ ಸಾವು ಮುಳುಗಿನಿಂದ ಸಂಭವಿಸಿದೆ ಎಂದು ಪ್ರಾಥಮಿಕ ವರದಿ ಹೇಳಿದೆ.
ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ಪೊಲೀಸರು ಇದನ್ನು ಕೊಲೆ ಪ್ರಕರಣ ಎಂದು ದಾಖಲಿಸಿದ್ದಾರೆ. ಕೆರೆಯನ್ನು ಖಾಲಿ ಮಾಡಿ ಪರಿಶೀಲಿಸಿದಾಗ ಕತ್ತಿ ಮತ್ತು ಟಾರ್ಚ್ ಲೈಟ್ ಪತ್ತೆಯಾಗಿದೆ. ಬೆಳ್ತಂಗಡಿ ಡಿವೈಎಸ್‌ಪಿ ಅವರ <ಮೂಲಕ> ನಾಲ್ಕು ತಂಡಗಳನ್ನು ರಚಿಸಿ ತನಿಖೆ ತೀವ್ರಗೊಳಿಸಲಾಗಿದೆ.