Webdunia - Bharat's app for daily news and videos

Install App

ಅನೈತಿಕ ಸಂಬಂಧಕ್ಕೆ ಆಕ್ಷೇಪಿಸಿ ಕೊಲೆ!

Webdunia
ಮಂಗಳವಾರ, 9 ನವೆಂಬರ್ 2021 (11:33 IST)
ಬೆಂಗಳೂರು : ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ದ ಗಾರ್ಮೆಂಟ್ಸ್ ನೌಕರನನ್ನು ಹತ್ಯೆ ಮಾಡಿದ ಮಹಿಳೆಯ ಸಹೋದರ ಸೇರಿ ನಾಲ್ವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಲೆ ಮಾಡಿದ ಬಳಿಕ ಆರೋಪಿಗಳು ಆಟೋದಲ್ಲಿ ಶವದೊಂದಿಗೆ ಬಂದು ಠಾಣೆಗೆ ಶರಣಾಗಿದ್ದಾರೆ.
ಹೊಸೂರು ಮದನಪಲ್ಲಿ ನಿವಾಸಿ ಗಾರ್ಮೆಂಟ್ಸ್ ಕಾರ್ಖಾನೆ ನೌಕರ ಭಾಸ್ಕರ್ (31) ಕೊಲೆಯಾದ ವ್ಯಕ್ತಿ. ಮಹಿಳೆಯ ಸಹೋದರ ಮುನಿರಾಜು (28) ಹಾಗೂ ಸಹಚರರಾದ ಮಾರುತಿ (22), ನಾಗೇಶ್ (22), ಪ್ರಶಾಂತ್ (20) ಎಂಬವರನ್ನು ಬಂಧಿಸಲಾಗಿದೆ.
ಮುನಿರಾಜು ಸಹೋದರಿಯು ಪತಿ ಹಾಗೂ ಇಬ್ಬರು ಮಕ್ಕಳ ಜತೆಗೆ ಮಾಲೂರಿನಲ್ಲಿ ವಾಸಿಸುತ್ತಿದ್ದರು. ಹೊಸೂರು ಬಳಿಯ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮುನಿರಾಜು ಸಹೋದರಿ ಜತೆಗೆ ಭಾಸ್ಕರ್ ಸಲುಗೆ ಬೆಳೆಸಿಕೊಂಡಿದ್ದ. ಕಳೆದ 15 ದಿನಗಳ ಹಿಂದೆ ಇದೇ ವಿಚಾರಕ್ಕೆ ಪತಿಯೊಂದಿಗೆ ಜಗಳ ಮಾಡಿದ ಮಹಿಳೆ, ಅನ್ನಪೂರ್ಣೇಶ್ವರಿ ನಗರದ ಚಂದ್ರಶೇಖರ ಲೇಔಟ್ನಲ್ಲಿರುವ ತನ್ನ ತವರು ಮನೆಗೆ ಮಕ್ಕಳೊಂದಿಗೆ ಬಂದಿದ್ದಳು.
ಶನಿವಾರ ರಾತ್ರಿ ಭಾಸ್ಕರ್ ಮಹಿಳೆ ಮನೆಗೆ ಬಂದು ಬೇರೆ ಮನೆ ಮಾಡಿಕೊಡುವುದಾಗಿ ಭರವಸೆ ನೀಡಿ, ಆಕೆಯನ್ನು ಮಕ್ಕಳ ಜತೆ ಆಟೋದಲ್ಲಿ ಕರೆದುಕೊಂಡು ಹೋಗುತ್ತಿದ್ದ. ಇಬ್ಬರು ಮಕ್ಕಳ ಪೈಕಿ ಹಿರಿಯ ಮಗ ಆಟೋದಿಂದಿಳಿದು, ಸೋದರ ಮಾವ ಮುನಿರಾಜುಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಮುನಿರಾಜು ತನ್ನ ಆಟೋದಲ್ಲಿಇತರ ಸ್ನೇಹಿತರನ್ನು ಕರೆದುಕೊಂಡು ಸುಂಕದಕಟ್ಟೆ ಬಳಿ ಸಹೋದರಿ ಮತ್ತು ಭಾಸ್ಕರ್ ಇದ್ದ ಆಟೋವನ್ನು ಅಡ್ಡಗಟ್ಟಿದ್ದ. ನಂತರ ಸಹೋದರಿಯನ್ನು ಮನೆಯಲ್ಲಿ ಬಿಟ್ಟು ಭಾಸ್ಕರ್ನನ್ನು ಕೆಬ್ಬೇ ಹಳ್ಳದ ಬಳಿಯ ನಿರ್ಜನ ಪ್ರದೇಶಕ್ಕೆ ಆಟೋದಲ್ಲಿ ಕರೆದೊಯ್ದು ಸಹಚರರ ಜತೆ ಸೇರಿ ಹಲ್ಲೆ ನಡೆಸಿದ್ದ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments