Publish Date: Sat, 30 Jul 2022 (16:20 IST)
Updated Date: Sat, 30 Jul 2022 (16:21 IST)
ಮೈಸೂರು : ಡಿಸಿ ಆಗಿದ್ದ ವೇಳೆ ಹಲವು ವ್ಯತ್ಯಯಗಳಿಗೆ ಕಾರಣರಾಗಿದ್ದ ಹಿನ್ನೆಲೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ವಸತಿ ಇಲಾಖೆ ನೋಟಿಸ್ ನೀಡಿದೆ.
ಮೈಸೂರು ಡಿಸಿ ಆಗಿದ್ದ ವೇಳೆ 4 ಆರೋಪಗಳಿಗೆ ಜುಲೈ 30 ರಂದು ಖುದ್ದು ಹಾಜರಾಗಿ ವಿವರಣೆ ನೀಡಬೇಕಾಗಿ ವಸತಿ ಇಲಾಖೆಯ ಕಾರ್ಯದರ್ಶಿ ಡಾ.ಜೆ ರವಿಶಂಕರ್ ರೋಹಿಣಿ ಸಿಂಧೂರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಇದೀಗ ರೋಹಿಣಿ ಸಿಂಧೂರಿಗೆ ನೋಟಿಸ್ ನೀಡಲಾಗಿದ್ದು, ಬೆಂಗಳೂರಿನ ವಿಕಾಸಸೌಧದ ವಸತಿ ಇಲಾಖೆಗೆ ಆಗಮಿಸಿ ವಿವರಣೆ ನೀಡುವಂತೆ ತಿಳಿಸಲಾಗಿದೆ.