Publish Date: Mon, 25 Jul 2022 (14:08 IST)
Updated Date: Mon, 25 Jul 2022 (14:42 IST)
ಮೈಸೂರು : ನಕಲಿ ಗೊಬ್ಬರ ತಯಾರಿಕೆ ಅಡ್ಡೆಯ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಂಡಕಳ್ಳಿ ಬಳಿಯ ಹಳೆ ಕೋಳಿ ಫಾರಂ ಒಂದರಲ್ಲಿ ನಕಲಿ ಗೊಬ್ಬರ ತಯಾರಿಸಲಾಗುತ್ತಿತ್ತು. ಖಚಿತ ಮಾಹಿತಿ ಆಧಾರಿಸಿ ಮೈಸೂರು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಮಧುಲತಾ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಹಲವು ಸಲಕರಣೆಗಳು ಪತ್ತೆಯಾಗಿವೆ. ಅಸಲಿ ಗೊಬ್ಬರಕ್ಕೆ ಮಿಶ್ರಣ ಮಾಡಲು ಶೇಖರಿಸಿಟ್ಟಿದ್ದ ಜೇಡಿಮಣ್ಣಿನ ಚೀಲಗಳು, ಯಂತ್ರೋಪಕರಣಗಳು ಪತ್ತೆಯಾಗಿವೆ.ಈ ಕುರಿತು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.