Select Your Language

Notifications

webdunia
webdunia
webdunia
Wednesday, 9 April 2025
webdunia

ಮೈಸೂರು: ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ

mother mysore karnataka ಮೈಸೂರು ಕರ್ನಾಟಕ ತಾಯಿ
bengaluru , ಮಂಗಳವಾರ, 28 ಜೂನ್ 2022 (14:43 IST)
ಮುದ್ದು ಮುದ್ದಾದ ಮಕ್ಕಳು, ಮತ್ತೊಂದು ಕಡೆ ತಾನು ಹೆತ್ತು ಸಾಕಿ ಸಲಹಿದ ಮಕ್ಕಳ ಜೊತೆಯಲ್ಲಿ ಶವವಾಗಿ ಮಲಗಿರೊ ತಾಯಿ. ಈ ದೃಶ್ಯ ನೋಡಿದ್ರೆ ಎಂಥವರ ಕರುಳು ಕೂಡ ಕಿತ್ತು ಬರದೆ ಇರಲಾರದು. ಅಂದಹಾಗೆ ಈ ಹೃದಯ ವಿದ್ರಾವಕ ಘಟನೆಗೆ ಸಾಕ್ಷಿಯಾಗಿದ್ದು ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ರಾಮೇಗೌಡನಪುರ.
ಅಂದಹಾಗೆ ಇಲ್ಲಿ ಸಾವನ್ನಪ್ಪಿದ ಗೃಹಿಣಿ ಹೆಸ್ರು ಸರೋಜಾ (32)  6 ವರ್ಷದ ಗೀತಾ,  4 ವರ್ಷದ ಕುಸುಮ ಮೃತ ಮಕ್ಕಳು. ಈ ಸರೋಜಾ ಪತಿ ನಿಂಗರಾಜು ಹೊಂದಿದ್ದ ಅನೈತಿಕ ಸಂಬಂಧವೇ ಈ ಮೂವರ ಸಾವಿಗೆ ಕಾರಣವಾಗಿದೆ.
ಸರೋಜಳನ್ನ ತಿ. ನರಸೀಪುರ ತಾಲೂಕಿನ ಮಾವಿನಹಳ್ಳಿ ಗ್ರಾಮದ ನಿಂಗರಾಜುವಿಗೆ ಮದುವೆ ಮಾಡುಕೊಡಲಾಗಿತ್ತು. ಇಬ್ಬರ ದಾಂಪತ್ಯಕ್ಕೆ ಮುದ್ದಾದ ಇಬ್ಬರು ಮಕ್ಕಳು ಕೂಡ ಇದ್ರು. ಅದ್ರೆ ಪತಿ ನಿಂಗರಾಜು ಮೃತ ಸರೋಜ ಳ ಅಣ್ಣನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದನಂತೆ. ಈ ವಿಚಾರದಲ್ಲಿ ಪತಿ ಪತ್ನಿ ಇಬ್ಬರ ನಡುವೆ ಅಗಾಗ್ಗೆ ಗಲಾಟೆ ನಡೆಯುತ್ತಿತ್ತು.
ಕೆಲ ದಿನಗಳ ಹಿಂದಷ್ಟೇ ಪತಿ ಮನೆ ಬಿಟ್ಟ ಸರೋಜ ತವರು ಮನೆ ರಾಮೇಗೌಡನಪುರಕ್ಕೆ ಬಂದಿದ್ಲು. ನಿನ್ನೆ ಡೆತ್ ನೋಟ್ ಬರೆದಿದ್ದ ಸರೋಜ, ಪತಿ ನಿಂಗರಾಜುವಿನಿಂದ ತನ್ನ ಅಣ್ಣನ ಕುಟುಂಬ ಹಾಳಾಗಿದೆ. ನನ್ನ ಅಣ್ಣನ ಮಕ್ಕಳ ಮುಖ ನೋಡಿದ್ರೆ ತುಂಬಾ ನೋವಾಗುತ್ತೆ. ನಾನು ಸತ್ತ ಬಳಿಕ ನನ್ನ ಮುಖವನ್ನ ನನ್ನ ಗಂಡನಿಗೆ ತೋರಿಸಬೇಡಿ ಎಂದು ಉಲ್ಲೇಖ ಮಾಡಿ ತನ್ನಿಬ್ಬರು ಮಕ್ಕಳನ್ನ ನೇಣಿಗೆ ಹಾಕಿ, ತಾನೂ ನೇಣಿಗೆ ಶರಣಾಗಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿವೋರ್ಸ್ ಪಡೆದ ದಂಪತಿ 52 ವರ್ಷ ನಂತರ ಮತ್ತೆ ಒಂದಾದರು!