Select Your Language

Notifications

webdunia
webdunia
webdunia
webdunia

ನೀವು ಹುಡುಕುತ್ತಿರುವ ಆರೋಪಿ ನಾನೇ ಅಂತ ಪೊಲೀಸರಿಗೆ ಕರೆ ಮಾಡಿದ!

mysore police karnataka ಕರ್ನಾಟಕ ಮೈಸೂರು ಪೊಲೀಸರು
bengaluru , ಮಂಗಳವಾರ, 28 ಜೂನ್ 2022 (14:29 IST)

ಸಾರ್‌… ನೀವು ಹುಡುಕುತ್ತಿರುವ ವ್ಯಕ್ತಿ ನಾನೇ. ನನ್ನನ್ನು ಬಂಧಿಸಿ ಎಂದು ಪೊಲೀಸರಿಗೆ ಕರೆ ಮಾಡಿ ದ ಆರೋಪಿ ಬಂಧಿಸಲು ಹೋದಾಗ ಹೈಡ್ರಾಮ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ನಂಜನಗೂಡಿನ ನಿವಾಸಿ ಮಹಾದೇವಸ್ವಾಮಿ ಎಂಬ ಆರೋಪಿ ಪೊಲೀಸರಿಗೆ ಕರೆ ಮಾಡಿ ಕರೆಸಿಕೊಂಡಿದ್ದೂಅಲ್ಲದೇ ಅವರು ಬಂದಾಗ ಕ್ರಿಮಿನಾಷಕ ಸೇವಿಸಿದ್ದೇನೆ ಬಂಧಿಸಿ ನೋಡೋಣ ಎಂದು ಸವಾಲು ಎಸೆದು ಹೈಡ್ರಾಮ ಮಾಡಿದ್ದಾನೆ.

ಕುಡಿದ ಅಮಲಿನಲ್ಲಿ ಆರೋಪಿ ಮಹದೇವಸ್ವಾಮಿ ತಮ್ಮದೇ ಗ್ರಾಮದ ಜವರನಾಯಕ ಎಂಬ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ನಾಪತ್ತೆಯಾಗಿದ್ದ, ಈತನನ್ನು ಹುಡುಕಲು ಪೊಲೀಸರು ಬೀಸಿದ್ದರು.

ಶುಕ್ರವಾರ ಕ್ರಿಮಿನಾಶಕ ಸೇವಿಸಿ ತಾನೇ ಪೊಲೀಸ್ಠಾಣೆಗೆ ಬಂದ ಆರೋಪಿ ತಾನಾಗಿಯೇ ಬಂದನೆಂದು ಆತನನ್ನು ಬಂಧಿಸಲು ಮುಂದಾದಾಗ ಆತ ನಾನೀಗ ವಿಷ ಕ್ರಿಮಿನಾಷಕ ಸೇವಿಸಿ ಬಂದಿದ್ದೇನೆ ನನ್ನನ್ನು ನೀವು ಏನು ಮಾಡಲು ಆಗುವುದಿಲ್ಎಂದು ಪೊಲೀಸರಿಗೆ ಎದರಿಸಿಸಲು ಮುಂದಾಗಿದ್ದಾನೆ ತಕ್ಷಣವೇ ಪೊಲೀಸರು ಮೇಲಾಧಿಕಾರಿಗಳ ಗಮನಕ್ಕೆ ತಂದು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಇದೀಗ ಆತ ಚೇತರಿಸಿಕೊಂಡಿದ್ದು 2 ದಿನಗಳಾದ ಬಳಿಕ ಆತನನ್ನು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಾಲರ್‌ ಎದುರು ಮತ್ತೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ!