Select Your Language

Notifications

webdunia
webdunia
webdunia
Wednesday, 2 April 2025
webdunia

ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್!

ಸಾಮಾಜಿಕ ಜಾಲತಾಣ
ಮೈಸೂರು , ಗುರುವಾರ, 14 ಜುಲೈ 2022 (17:08 IST)
ಮೈಸೂರು : ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ ಹಿನ್ನೆಲೆಯಲ್ಲಿ ಯುವಕನೊಬ್ಬನ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಿತಿನ್ ಮತ್ತು ಮನು ಸೇರಿ ಬೇರೇಶ್(23) ಎಂಬವನನ್ನು ಕೊಲೆ ಮಾಡಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಸರಸ್ವತಿ ಪ್ಲಾಜ್ ಬಳಿ ಘಟನೆ ನಡೆದಿದೆ.

ಇನ್ಸ್ಟಾಗ್ರಾಮ್ನಲ್ಲಿ ನಿತಿನ್ ಬಗ್ಗೆ ಬೀರೇಶ್ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ಆರೋಪ ಇದೀಗ ಕೇಳಿ ಬರುತ್ತಿದೆ. ಇದೇ ದ್ವೇಷಕ್ಕೆ ತಿರುಗಿ ನಿತಿನ್ ಹಾಗೂ ಮನು ಇಬ್ಬರು ಸೇರಿ ಬೇರೆಶ್ನನ್ನು ಚಾಕು ಇರಿದು ಹತ್ಯೆ ಮಾಡಿದ್ದಾರೆ. 

ಚಾಕು ಇರಿತದಿಂದ ಗಂಭೀರ ಗಾಯಗೊಂಡಿದ್ದ ಬೀರೇಶ್ನನ್ನು ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೀರೇಶ್ ಮೃತಪಟ್ಟಿದ್ದಾನೆ.


Share this Story:

Follow Webdunia kannada

ಮುಂದಿನ ಸುದ್ದಿ

ಈದ್ಗಾ ಮೈದಾನದಲ್ಲಿ ಹಬ್ಬ ಆಚರಿಸಲ್ಲು ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ..!!!