Select Your Language

Notifications

webdunia
webdunia
webdunia
webdunia

ಮಾಡಾಳ್​ ಇಬ್ಬರು ಮಕ್ಕಳಿಗೂ ನೋಟಿಸ್

ಮಾಡಾಳ್​ ಇಬ್ಬರು ಮಕ್ಕಳಿಗೂ ನೋಟಿಸ್
ಲೋಕಾಯುಕ್ತದಿಂದ ಮಾಡಾಳ್ ಮನೆ ಮೇಲೆ ದಾಳಿ ಪ್ರಕರಣ ಎತ್ತ ಹೋದ್ರೂ ಮಾಡಾಳ್ ಫ್ಯಾಮಿಲಿಗೆ ಸುತ್ತಿಕೊಳ್ತಿದೆ. ಪ್ರಶಾಂತ್ ಆಯ್ತು, ವಿರೂಪಾಕ್ಷಪ್ಪ ಆಯ್ತು, ಈಗ ನೇರ ಮಲ್ಲಿಕಾರ್ಜುನ್ ಮತ್ತು ಪ್ರದೀಪ್​ನತ್ತ ಪ್ರಕರಣ ಸಾಗ್ತಿದೆ. ವಿರೂಪಾಕ್ಷಪ್ಪ ಇನ್ನೂ ಇಬ್ಬರ ಮಕ್ಕಳಿಗೂ ತಗಲಾಕಿಕೊಂಡಿದೆ. ಹಾಗಾದ್ರೆ ಆ ಇಬ್ಬರಿಗೆ ಈ ಕೇಸ್ ಕನೆಕ್ಟ್ ಆಗೋ ಸಾಧ್ಯತೆ ಇದೆ. ಮಲ್ಲಿಕಾರ್ಜುನ್, ಪ್ರದೀಪ್​ಗೆ ನೊಟೀಸ್ ಕೊಟ್ಟು ವಿಚಾರಣೆಗೆ ಕರೆಯಲು ಅಧಿಕಾರಿಗಳು ಚಿಂತನೆ ನಡೆಸಿದ್ಧಾರೆ. ಲೋಕಾಯುಕ್ತದಿಂದ ಇಬ್ಬರಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ. ಟ್ರ್ಯಾಪ್ ದಿನವೇ ಸಿಕ್ಕ ಕೆಲ ಅಂಶಗಳ ಮೇಲೆ ನೋಟಿಸ್ ನೀಡಲಾಗಿದೆ. ಬ್ಯುಸಿನೆಸ್ ಮೂಲಕ ಬ್ಲ್ಯಾಕ್ ಆ್ಯಂಡ್ ವೈಟ್ ಮಾಡ್ತಿರೋ ಶಂಕೆ ವ್ಯಕ್ತವಾಗಿದೆ. ಅಡಿಕೆ ವ್ಯಾಪಾರದ ಬ್ಯುಸಿನೆಸ್ ಹೊಂದಿರೋ ಮಲ್ಲಿಕಾರ್ಜುನ್ ಮತ್ತು ಪ್ರದೀಪ್, ಮನೆಗೆ ಬರ್ತಿದ್ದ ಕೋಟಿ ಕೋಟಿ ಹಣದಿಂದ ಅಡಿಕೆ ಬ್ಯುಸಿನೆಸ್​ಗೆ ಬಳಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಡಾಳ್​ ಪ್ರಕರಣದ ತನಿಖಾಧಿಕಾರಿಗಳು ಚೇಂಜ್