Select Your Language

Notifications

webdunia
webdunia
webdunia
webdunia

ಇಬ್ಬರು ಅಧಿಕಾರಿಗೂ ನೋಟೀಸ್ ಜಾರಿ- ಆರಗ ಜ್ಞಾನೇಂದ್ರ

ಇಬ್ಬರು ಅಧಿಕಾರಿಗೂ ನೋಟೀಸ್ ಜಾರಿ- ಆರಗ ಜ್ಞಾನೇಂದ್ರ
bangalore , ಸೋಮವಾರ, 20 ಫೆಬ್ರವರಿ 2023 (14:47 IST)
ಸರ್ಕಾರದ ಇಬ್ಬರು ಉನ್ನತ ಮಟ್ಟದ ಮಹಿಳಾ ಅಧಿಕಾರಿಗಳು ಹಾದಿರಂಪ ಬೀದಿರಂಪವಾಗಿ ಜಗಳ ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಸಾಮಾನ್ಯ ಮನುಷ್ಯರು ಹಾದಿಮಧ್ಯೆ ಜಗಳ ಮಾಡುವಂತೆ ವಿದ್ಯಾವಂತ ಉನ್ನತ ಅಧಿಕಾರಿಗಳು ಈ ರೀತಿ ಸಾರ್ವಜನಿಕವಾಗಿ ಕಿತ್ತಾಡುವುದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಈ ನಿಟ್ಟಿನಲ್ಲಿ ಇಬ್ಬರಿಗೂ ನೊಟೀಸ್ ನೀಡಲು ಮುಖ್ಯಮಂತ್ರಿ ಬೊಮ್ಮಾಯಿಯವರು ಸೂಚನೆ ನೀಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇವರಿಬ್ಬರ ಜಗಳ ನಿನ್ನೆಯಿಂದ ಮಾಧ್ಯಮಗಳಲ್ಲಿ ಬರುತ್ತಿದ್ದು ಹಲವು ವಿಷಯಗಳು ಪ್ರಸ್ತಾಪವಾಗಿದೆ. ವೈಯಕ್ತಿಕವಾಗಿ ಇವರಿಬ್ಬರಿಗೆ ಭಿನ್ನಾಭಿಪ್ರಾಯಗಳಿದ್ದರೆ ಏನಾದರೂ ಮಾಡಿಕೊಳ್ಳಲಿ, ಅಥವಾ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಬೇಕಾಗಿತ್ತು. ಆದರೆ ಈ ರೀತಿ ಸಾರ್ವಜನಿಕವಾಗಿ ಕಿತ್ತಾಡಿಕೊಳ್ಳುವುದು ಸರಿಯಲ್ಲ, ಇದನ್ನು ನೋಡಿಕೊಂಡು ಸರ್ಕಾರ ಸುಮ್ಮನೆ ಕೂರುವುದಿಲ್ಲ, ಇಬ್ಬರಿಗೂ ನೊಟೀಸ್ ಜಾರಿ ಮಾಡಲಾಗುವುದು ಎಂದು ಗೃಹ ಸಚಿವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೂಪಾ, ರೋಹಿಣಿ ನಡೆಗೆ ಸಿಎಂ ಬೊಮ್ಮಾಯಿ ಗರಂ