Publish Date: Mon, 04 Sep 2017 (21:00 IST)
Updated Date: Mon, 04 Sep 2017 (21:02 IST)
ಸರಕಾರಕ್ಕೆ ತಾಕತ್ತಿದ್ರೆ ಬೈಕ್ ರ್ಯಾಲಿ ತಡೆಯಿಲಿ ಎಂದು ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ನೇರ ಸವಾಲ್ ಹಾಕಿದ್ದಾರೆ.
ಮಂಗಳೂರು ಚಲೋ ಬೈಕ್ ರ್ಯಾಲಿ ನಡೆಸಿಯೇ ನಡೆಸುತ್ತೇವೆ. 20 ಸಾವಿರಕ್ಕೂ ಹೆಚ್ಚು ಬೈಕ್‌ಗಳು ರ್ಯಾಲಿಯಲ್ಲಿ ಪಾಲ್ಗೊಳ್ಳಲಿವೆ. ದಕ್ಷಿಣ ಕನ್ನಡ ಜಿಲ್ಲೆಗೆ ರ್ಯಾಲಿ ಪ್ರವೇಶಕ್ಕೆ ನಿರಾಕರಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಮಂಗಳೂರು ಚಲೋ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ರಾಜ್ಯ ಸರಕಾರವೇ ತಡೆಯಲು ಯತ್ನಿಸಿದರೂ ರ್ಯಾಲಿ ನಿಲ್ಲುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯ ಸರಕಾರ ಹಿಂಸಾಚಾರಕ್ಕೆ ಕಾರಣವಾಗುತ್ತಿರುವ ಮುಸ್ಲಿಂ ಸಂಘಟನೆಗಳಿಗೆ ನಿಷೇಧ ಹೇರಲಿ. ಅದನ್ನು ಬಿಟ್ಟು ಬಿಜೆಪಿ ರ್ಯಾಲಿಯನ್ನು ತಡೆಯುವುದು ಸರಿಯಲ್ಲ ಎಂದು ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.