Publish Date: Mon, 04 Sep 2017 (18:41 IST)
Updated Date: Mon, 04 Sep 2017 (18:44 IST)
ನಿಮ್ಮದೊಂದು ಸರ್ಕಾರ, ನೀವೊಬ್ರು ಹೋಂ ಮಿನಿಸ್ಟ್ರು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿಯವರಿಗೆ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿಯವರು ಮಂಗಳೂರಿಗೆ ಬೈಕ್‌ನಲ್ಲಿ ಯಾಕೆ ಹೋಗಬೇಕು. ನಡೆದುಕೊಂಡು ಹೋಗುವುದು ಸೂಕ್ತ. ನಡೆದುಕೊಂಡು ಹೋದರೆ ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ನೀಡಿದ ಹೇಳಿಕೆಗೆ ಈಶ್ವರಪ್ಪ ಕೆಂಡಾಮಂಡಲವಾಗಿದ್ದಾರೆ.
ಬೈಕ್ ರ್ಯಾಲಿಗೆ ಆಯಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಅನುಮತಿ ನೀಡುತ್ತಾರೆ ಎನ್ನುವ ಗೃಹ ಸಚಿವರ ಹೇಳಿಕೆಯಿಂದ ಕೋಪಗೊಂಡು, ಎಲ್ಲವನ್ನು ಎಸ್‌ಪಿಗಳೇ ಮಾಡುವುದಾದರೇ ನೀವು ಯಾಕೆ ಹೋಮ್ ಮಿನಿಸ್ಟರ್ ಆಗಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಉದ್ದೇಶಪೂರ್ವಕವಾಗಿ ಬೈಕ್ ರ್ಯಾಲಿ ತಡೆಯಲು ಯತ್ನಿಸುತ್ತಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.