Publish Date: Fri, 02 Jan 2026 (17:14 IST)
Updated Date: Fri, 02 Jan 2026 (17:18 IST)
ಬಳ್ಳಾರಿ: ಇಲ್ಲಿ ನಡೆದ ಗಲಭೆ ವಿಚಾರವಾಗಿ ಯಾರನ್ನೂ ಸುಮ್ಮನೇ ಬಿಡಲ್ಲ. ಪರಿಸ್ಥಿತಿ ಕಂಟ್ರೋಲ್‌ಗೆ ಬಂದಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಎಲ್ಲ ಮಾಹಿತಿಯನ್ನು ನೀಡಿದ್ದೇನೆ. ಪ್ರಕರಣದಲ್ಲಿ ಭಾಗಿಯಾಗಿರುವ ಯಾರೊಬ್ಬರನ್ನೂ ಬಿಡೋದಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.
ಬಳ್ಳಾರಿ ಶೂಟೌಟ್ ಪ್ರಕರಣ ಸಂಬಂಧ, ಬ್ಯಾನರ್ ಕಟ್ಟುವ ವಿಚಾರದಲ್ಲಿ ಘರ್ಷಣೆ ಆಗಿದೆ, ಇದು ಆಗಬಾರದಿತ್ತು. ನಾನು ಈಗಾಗಲೇ ಬಳ್ಳಾರಿ ಡಿಸಿ, ಎಸ್ಪಿ ಜತೆ ಮಾತುಕತೆ ನಡೆಸಿದ್ದೇನೆ ಎಂದರು.
ಬಳ್ಳಾರಿ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಕಾರ್ಯಕರ್ತ ಈ ಗಲಭೆಯಲ್ಲಿ ಸಾವನ್ನಪ್ಪಿದ್ದು, ಈ ವಿಚಾರವಾಗಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಯಾರೇ ಆಗಿದ್ದರೂ ಕ್ರಮ ಕೈಗೊಳ್ಳುತ್ತೇವೆ. ನಾಗೇಂದ್ರ ಬಳ್ಳಾರಿಗೆ ಹೋಗ್ತಾ ಇದ್ದಾರೆ ಎಂದರು.