Publish Date: Fri, 17 Apr 2026 (19:05 IST)
Updated Date: Fri, 17 Apr 2026 (19:09 IST)
ನವದೆಹಲಿ: ಕಾಂಗ್ರೆಸ್ ಪಕ್ಷ ಮುಸ್ಲಿಂ ನಾಯಕರಿಗೆ ಸಹಾಯ ಮಾಡಿದ್ದಷ್ಟು ಯಾರೂ ಮಾಡಿಲ್ಲ. ಈ ಹಿಂದೆಯೂ ಯಾರೂ ಮಾಡಿಲ್ಲ, ಮುಂದೆಯೂ ಮಾಡಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ನಾನು ಈ ವಿಚಾರವನ್ನ ಪತ್ರಿಕೆಯಲ್ಲಷ್ಟೇ ನೋಡಿದೆ. ಕ್ಯಾಬಿನೆಟ್ ನಲ್ಲಿ ಈ ಬಗ್ಗೆ ಚರ್ಚೆಗೆ ಬಂದಿಲ್ಲ. ನಾನೂ ಚರ್ಚೆ ಮಾಡಿಲ್ಲ. ಇನ್ನೂ ಕ್ಯಾಬಿನೆಟ್ ಬಳಿಕ ವೈಯಕ್ತಿಕ ಕೆಲಸವಿದ್ದಿದ್ದರಿಂದ ನಾನು ಹೋಗಿರುವುದು. ಇನ್ನು ಈ ಬೆಳವಣಿಗೆ ಬಗ್ಗೆ ನನಗೇನೂ ಗೊತ್ತಿಲ್ಲ. ಹೈಕಮಾಂಡ್, ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಇನ್ನು ಮುಸ್ಲಿಂ ನಾಯಕರು ಟಾರ್ಗೆಟ್ ಆಗಿಲ್ಲ.ಅವರಿಗೆ ಕಾಂಗ್ರೆಸ್ ಪಕ್ಷ ಸಹಾಯ ಮಾಡಿದ್ದಷ್ಟು ಬೇರೆ ಯಾರೂ ಮಾಡಿಲ್ಲ. ಕಾಂಗ್ರೆಸ್ ಪ್ರತಿ ಹಂತದಲ್ಲೂ ಬೆನ್ನೆಲುಬಾಗಿ ನಿಂತಿದೆ.
ಇನ್ನೂ ಮುಸ್ಲಿಂರಿಗೆ ಕಾಂಗ್ರೆಸ್ ಸಹಾಯಮಾಡಿದ್ದಷ್ಟು ಹಿಂದೆಯೂ ಯಾರೂ ಮಾಡಿಲ್ಲ, ಮುಂದೆಯೂ ಯಾರೂ ಮಾಡಲ್ಲ.
ದಾವಣಗೆರೆ ದಕ್ಷಿಣ ಅದು ಅಲ್ಪಸಂಖ್ಯಾತರ ಸೀಟು ಅಲ್ಲ. ಅಲ್ಲಿ ಶಾಮನೂರು ಶಿವಶಂಕರಪ್ಪ ಕ್ಷೇತ್ರವನ್ನ ಕಾಪಾಡಿಕೊಂಡು ಬಂದಿದ್ದಾರೆ. ಜನಸಂಖ್ಯೆ ಇತ್ತು, ಅವರು ಕೇಳಿದ್ದು ತಪ್ಪಿಲ್ಲ. ಅಲ್ಪಸಂಖ್ಯಾತ ಕೆಲವು ನಾಯಕರು ಟಿಕೆಟ್ ಕೇಳಿದ್ದರು. ಅವರು ಒಪ್ಪಿದ ಮೇಲೆ ಸಮರ್ಥಗೆ ಟಿಕೆಟ್ ನೀಡಿದೆ. ಕೆಲವು ರಿಪೊರ್ಟ್ ಗಳ ಆಧಾರದ ಮೇಲೆ ಪಕ್ಷ ಕ್ರಮ ತೆಗೆದುಕೊಂಡಿದೆ ಅಷ್ಟೇ ಎಂದಿದ್ದಾರೆ.