Publish Date: Fri, 05 Aug 2022 (11:19 IST)
Updated Date: Fri, 05 Aug 2022 (11:57 IST)
ಬೆಂಗಳೂರು : ಸೋನಿಯಾಗಾಂಧಿ ಅವರ ತಾಯಿ ಪ್ರೀತಿ ಮೇಲೆ ನನಗೆ ನಂಬಿಕೆಯಿದೆ.
ನನ್ನ ಹಣೆಯಲ್ಲಿ ಬರೆದಿದ್ದರೆ ಸಿಎಂ ಆಗೋದು ತಪ್ಪಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಾನು ಪಕ್ಷಕ್ಕಾಗಿ ಚಪ್ಪಡಿ ಆಗೋಕೂ ರೆಡಿ. ಆದ್ರೆ ಸನ್ಯಾಸಿ ಆಗಲ್ಲ. ಪಕ್ಷಕ್ಕಾಗಿ ರಕ್ತ, ಬೆವರು ಕೊಟ್ಟಿದ್ದೇನೆ. 2 ವರ್ಷದಿಂದ ನಿದ್ರೆ ಮಾಡಿಲ್ಲ. ಏಕೆಂದರೆ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಹೇಳಿದ್ದಾರೆ.
ನಮಗೊಂದು ಅವಕಾಶ ಮಾಡಿಕೊಟ್ಟರೆ, ನಾವೂ ಜನಸೇವೆ ಮಾಡುತ್ತೇವೆ. ನಾನು ಜೈಲಲ್ಲಿದ್ದಾಗ ತಾಯಿ ಸೋನಿಯಾ ವಿಚಾರಿಸಿದ್ರಲ್ಲ, ಇನ್ನೇನು ಬೇಕು? ತಿಹಾರ್ ಜೈಲಿಗೆ ಬಂದು ಒಂದೂವರೆ ಗಂಟೆ ಮಾತಾಡಿಸಿದ್ರು. ಸೋನಿಯಾ ಗಾಂಧಿಯ ತಾಯಿ ಪ್ರೀತಿ ಮೇಲೆ ನಂಬಿಕೆ ಇದೆ.