‘ಹಲಾಲ್ ವಿಚಾರಕ್ಕೆ ಮೂಗು ತೂರಿಸಲ್ಲ’

Webdunia
ಗುರುವಾರ, 31 ಮಾರ್ಚ್ 2022 (18:57 IST)
ಹಲಾಲ್ ಎಂಬುದು ಒಂದು ಧಾರ್ಮಿಕ ಆಚರಣೆಯಾಗಿದೆ. ಇದು ಸರ್ಕಾರದ ನಿಯಮವೇನು ಅಲ್ಲ. ಇದರಿಂದಾಗಿ ಸರ್ಕಾರ ಹಲಾಲ್‌ ವಿಚಾರದಲ್ಲಿ ಮೂಗು ತೋರಿಸುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲಾಲ್ ಎಂಬುದು ಒಂದು ಧಾರ್ಮಿಕ ಆಚರಣೆಯಾಗಿದೆ. ಅದು ನಿನ್ನೆ ಮೊನ್ನೆವರೆಗೆ ಯಾರಿಗೂ ಗೊತ್ತಿರಲಿಲ್ಲ. ಇದು ಸರ್ಕಾರದ ನಿಯಮವೇನೂ ಅಲ್ಲ. ಈ ವಿಷಯದಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ ಎಂದರು. ಹಲಾಲ್‍ ಇಷ್ಟವಿದ್ದವರು ಅಂಗಡಿಗಳಲ್ಲಿ ಸ್ವೀಕರಿಸುತ್ತಾರೆ. ಇಷ್ಟವಿಲ್ಲದವರು ಬೇರೆ ಅಂಗಡಿಗಳಲ್ಲಿ ಕೊಳ್ಳುತ್ತಾರೆ. ಇದನ್ನು ಜನರೇ ಮಾಡಿಕೊಂಡಿದ್ದಾರೆ ವಿನಃ ನಾವು ಮಾಡಿದ್ದಲ್ಲ. ಈ ವಿಷಯವನ್ನು ಜನರು ಎತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ತಮಗೆ ಬೇಕಾದ ವಿಷಯವನ್ನು ಎತ್ತುವ ಅಧಿಕಾರವಿದೆ. ಈ ವಿಷಯವನ್ನು ಸರ್ಕಾರವಾಗಲೀ, ಯಾವುದೇ ರಾಜಕೀಯ ಪಕ್ಷವಾಗಲೀ ಎತ್ತಿಲ್ಲ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

IPL 2026: ಕೊನೆಗೂ ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್

ಗುವಾಹಟಿಯ ಸರುಸಜೈಯಲ್ಲಿ ಭವ್ಯ ರೋಡ್‌ ಶೋ ನಡೆಸಿದ ಪ್ರಧಾನಿ ಮೋದಿ

ಮಧ್ಯಪ್ರದೇಶದಲ್ಲಿ ಇಂದಿಗೂ ಶುದ್ಧ ನೀರು ಸಿಗುತ್ತಿಲ್ಲ: ರಾಹುಲ್ ಗಾಂಧಿ ಕಿಡಿ

ತಮಿಳುನಾಡು ವಿಧಾನಸಭೆ ಚುನಾವಣೆ, ಮಹಿಳೆಯರ ಹಾಗೇ ಪುರುಷರಿಗೂ ಫ್ರೀ ಬಸ್‌ ಘೋಷಿಸಿದ AIADMK

ರಾಜ್ಯದಲ್ಲಿ ಕಾನೂನು ಹೇಗಿದೆ ಎಂಬುದಕ್ಕೇ ಈ ರಕ್ತಸಿಕ್ತ ಘಟನೆ ಸಾಕ್ಷಿ

ಮುಂದಿನ ಸುದ್ದಿ
Show comments