Publish Date: Wed, 20 Jul 2022 (16:29 IST)
Updated Date: Wed, 20 Jul 2022 (17:34 IST)
ಸಚಿವರು ಕೆಲಸವನ್ನೇ ಮಾಡುತ್ತಿಲ್ಲ ಎಂಬ ರೇಣುಕಾಚಾರ್ಯ ಮಾತನ್ನು ಒಪ್ಪುವಿರಾ ಎಂದು ರಾಜ್ಯ ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ವ್ಯಾಪಾರಸೌಧದ 3ನೇ ಮಹಡಿಗೆ ಸೀಮಿತರಾಗಿದ್ದಾರೆ.
ತಮ್ಮ ಕ್ಷೇತ್ರ ಬಿಟ್ಟು ಮಂತ್ರಿಗಿರಿಯ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಸಚಿವರು ರಾಜೀನಾಮೆ ಕೊಡಬೇಕು. ಇದು ಬಿಜೆಪಿ ಶಾಸಕ ರೇಣುಕಾಚಾರ್ಯರ ಮಾತುಗಳು' ಎಂದು ಕಾಂಗ್ರೆಸ್ ತಿಳಿಸಿದೆ.
ಬಿಜೆಪಿಗೆ ಉತ್ಸವ ಮಾಡುವ ಉತ್ಸಾಹವಿಲ್ಲ, ಮಾಡುವುದಾದರೆ 'ಕಲಹೊತ್ಸವ' ಮಾಡಬಹುದು, ಆ ಮಟ್ಟಿಗಿದೆ ಬಿಜೆಪಿ ಕಲಹ. ಮಂತ್ರಿಗಳು ಕೆಲಸ ಮಾಡ್ತಿಲ್ಲ ಎಂದು ಸ್ವತಃ ಬಿಜೆಪಿಯ ರೇಣುಕಾಚಾರ್ಯ ಅವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಮಂತ್ರಿಗಳ ಮೇಲೆ ಬೊಂಬೆ ಬೊಮ್ಮಾಯಿ ಅವರಿಗೆ ಹಿಡಿತವಿಲ್ಲದಿರುವುದೇ ಈ ನಿಷ್ಕ್ರೀಯತೆಗೆ ಕಾರಣ ಎಂದು ಕಾಂಗ್ರೆಸ್ ಹೇಳಿದೆ.