Select Your Language

Notifications

webdunia
webdunia
webdunia
webdunia

ಪ್ರಿಯಾಂಕ್ ಖರ್ಗೆಗೆ ಕೊಟ್ಟ ನೋಟಿಸ್ ಗೆ ಶಕ್ತಿಯೇ ಇಲ್ವಂತೆ: ಪಿ ರಾಜೀವ್

p rajiv

Krishnaveni K

ಬೆಂಗಳೂರು , ಗುರುವಾರ, 2 ಜನವರಿ 2025 (14:31 IST)
ಬೆಂಗಳೂರು: ಪ್ರಿಯಾಂಕ ಖರ್ಗೆ ಅವರ ನೋಟಿಸಿನಲ್ಲಿ ಜೀವ ಇಲ್ಲ; ನಿಶ್ಶಕ್ತ ನೋಟಿಸನ್ನು ಕೊಟ್ಟಿದ್ದಾಗಿ ಸ್ವತಃ ಪ್ರಿಯಾಂಕ ಖರ್ಗೆಯವರು ಒಪ್ಪಿಕೊಂಡಂತಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ವಿಶ್ಲೇಷಿಸಿದರು.
 
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಪ್ರಿಯಾಂಕ ಖರ್ಗೆಯವರ ನೋಟಿಸಿಗೆ ನಾನು ಯಾವುದೇ ಪ್ರಾಮುಖ್ಯತೆ ಕೊಟ್ಟಿಲ್ಲ. ಇಲ್ಲಿನವರೆಗೆ ಅವರ ನೋಟಿಸ್ ಮೇಲೆ ಏನೇ ಕ್ರಮ ತೆಗೆದುಕೊಳ್ಳಲು ಅವರಿಗೆ ಆಗಿಲ್ಲವೆಂದಾದರೆ ಆ ನೋಟಿಸಿಗೆ ಮೌಲ್ಯವಿಲ್ಲ ಎಂದು ಅವರೇ ಒಪ್ಪಿಕೊಂಡಂತಾಗಿದೆ ಎಂದು ವಿಶ್ಲೇಷಿಸಿದರು.
 
ಒಂದು ವರ್ಷದ ಹಿಂದೆ ನೋಟಿಸ್ ನೀಡಿದ್ದಾಗಿ ಪ್ರಿಯಾಂಕ ಖರ್ಗೆ ಹೇಳಿಕೊಂಡರು. ಒಂದು ವರ್ಷದ ಹಿಂದೆ ಕೊಟ್ಟ ನೋಟಿಸಿಗೆ ನಾನು ಒಂದು ಚೂರೂ ಅಲುಗಾಡಿಲ್ಲ (ಶೇಕ್ ಆಗಿಲ್ಲ) ಎಂದರು. ಪ್ರಿಯಾಂಕ ಖರ್ಗೆಯವರೇ ಯಾವಾಗ ನೀವು ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳುತ್ತೀರಿ; ಅಷ್ಟೇ ಹೇಳಿ ಎಂದು ಪ್ರಶ್ನೆ ಹಾಕಿದರು.

ಇನ್ನು ಸಚಿನ್ ಡೆತ್ ನೋಟ್ ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿಲ್ಲ ಎಂದ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಡೆತ್ ನೋಟ್ ಪ್ರಕಟಿಸಿ ತಿರುಗೇಟು ನೀಡಿದೆ. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿ, ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಆತ್ಮಹತ್ಯೆ ಮಾಡಿಕೊಂಡ ಸಚಿನ್ ಪಾಂಚಾಳ್ ಬರೆದ ಡೆತ್ ನೋಟ್ ನಲ್ಲಿ ಸಚಿವ ಶ್ರೀ ಪ್ರಿಯಾಂಕ ಖರ್ಗೆ ಹೆಸರು ಇಲ್ಲ ಎನ್ನುತ್ತಿದ್ದಾರೆ. ಈ ಡೆತ್ ನೋಟ್ ತಮಗೆ ತಲುಪಿಲ್ಲ ಅನಿಸುತ್ತದೆ. ಆದ್ದರಿಂದ ಅಂಚೆ ಮೂಲಕ ತಮಗೆ ಈ ಡೆತ್ ನೋಟ್ ತಲುಪಿಸುತ್ತಿದ್ದೇವೆ. ದಯವಿಟ್ಟು ತಕ್ಷಣ ಇದನ್ನು ಓದಿ ಪ್ರಿಯಾಂಕ್ ಖರ್ಗೆರವರ ರಾಜೀನಾಮೆ ಪಡೆಯಿರಿ ಎಂದು ಆಗ್ರಹಿಸಿದೆ.
 
 

Share this Story:

Follow Webdunia kannada

ಮುಂದಿನ ಸುದ್ದಿ

ದೇಗುಲಗಳಲ್ಲಿ ಪುರುಷರಿಗೆ ಮೇಲ್ವಸ್ತ್ರ ಧರಿಸುವ ನಿಯಮ ರದ್ದು: ಕೇರಳ ಸಿಎಂ ಪಿಣರಾಯಿ ಚಿಂತನೆ