Select Your Language

Notifications

webdunia
webdunia
webdunia
webdunia

ಜಂಕ್ ಫುಡ್ ಬೇಡ, ಸಾಂಪ್ರದಾಯಿಕ ಭಾರತೀಯ ಆಹಾರ ಸೇವಿಸಿ ಆರೋಗ್ಯ: ವೆಂಕಯ್ಯ ನಾಯ್ಡು

ಜಂಕ್ ಫುಡ್ ಬೇಡ, ಸಾಂಪ್ರದಾಯಿಕ ಭಾರತೀಯ ಆಹಾರ ಸೇವಿಸಿ ಆರೋಗ್ಯ: ವೆಂಕಯ್ಯ ನಾಯ್ಡು
ಬೆಂಗಳೂರು , ಮಂಗಳವಾರ, 24 ಆಗಸ್ಟ್ 2021 (12:09 IST)
ಬೆಂಗಳೂರು: ಜಂಕ್ ಫುಡ್ ಸೇವಿಸಬೇಡಿ. ನಮ್ಮ ಸಾಂಪ್ರದಾಯಿಕ ಭಾರತೀಯ ಆಹಾರ ಸೇವಿಸಿ. ಆರೋಗ್ಯ ಮಹಾ ಭಾಗ್ಯ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಲಹೆ ನೀಡಿದರು. ಬೆಂಗಳೂರಿನ ರಾಜಭವನದಲ್ಲಿ ವ್ಯಾಕ್ಸಿನೇಟ್ ಇಂಡಿಯಾ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ಚಾಲನೆ ನೀಡಿದರು. ಸಾಂಕೇತಿಕವಾಗಿ ಇಬ್ಬರು ಮಹಿಳೆಯರಿಗೆ ವ್ಯಾಕ್ಸಿನ್ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಂತರ ಮಾತನಾಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮೈ ಮರೆಯಬೇಡಿ, ಆರು ಅಡಿ ಅಂತರ ಇರಲಿ. ಮಾಸ್ಕ್ ಸದಾ ಹಾಕಿಕೊಳ್ಳಿ, ಕೈ ತೊಳೆಯುತ್ತಿರಿ. ವ್ಯಾಕ್ಸಿನ್ ಹಾಕಿಸಿಕೊಳ್ಳಿ. ಇದು ಕಡ್ಡಾಯ ವ್ಯಾಕ್ಸಿನ್ ಗೆ ಪರ್ಯಾಯ ಯಾವುದೂ ಇಲ್ಲ ಎಂದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಡವರು, ಕೆಳ ಹಂತದ ವರ್ಗದವರಿಗೆ ವ್ಯಾಕ್ಸಿನ್ ನೀಡಬೇಕಾಗಿದೆ. ಆಗ ಕೊರೊನ ವಿರುದ್ಧ ಹೋರಾಡಲು ಶಕ್ತಿ ಸಿಗುತ್ತದೆ. ಖಾಸಗಿ ಸಂಸ್ಥೆಗಳು ವ್ಯಾಕ್ಸಿನ್ ಕಾರ್ಯಕ್ಕೆ ಸಿಎಸ್ಆರ್ ನಿಧಿ ಬಳಕೆ ಮಾಡಬೇಕು ಎಂದರು.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಸಚಿವರಾದ ಡಾ. ಕೆ. ಸುಧಾಕರ್, ಮುನಿರತ್ನ, ಸಂಸದ ಪಿಸಿ ಮೋಹನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಇಂದೇ ರಾಜೀನಾಮೆ ಕೊಡ್ತಾರಾ ಸಚಿವ ಆನಂದ್ ಸಿಂಗ್..?