Select Your Language

Notifications

webdunia
webdunia
webdunia
webdunia

ಬೆಳಗಿನ ತಿಂಡಿಗೆ ಈ ಸಲಾಡ್ಗಳ ಸೇವನೆ ಎಷ್ಟು ಆರೋಗ್ಯಕರ ಗೊತ್ತಾ?

ಬೆಳಗಿನ ತಿಂಡಿಗೆ ಈ ಸಲಾಡ್ಗಳ ಸೇವನೆ ಎಷ್ಟು ಆರೋಗ್ಯಕರ ಗೊತ್ತಾ?
ಬೆಂಗಳೂರು , ಮಂಗಳವಾರ, 24 ಆಗಸ್ಟ್ 2021 (09:29 IST)
Healthy Salads: ನಮ್ಮ ಆರೊಗ್ಯವನ್ನು ಕಾಪಾಡಿಕೊಳ್ಳಬೇಕು ಎಂದಲ್ಲಿ ನಾವು ಹೆಚ್ಚು ಪೋಷಕಾಂಶಗಳನ್ನು ಸೇವಿಸಬೇಕು. ನಮ್ಮ ದೇಹಕ್ಕೆ ಬೆಳಗಿನ ಸಮಯದಲ್ಲಿ ಹೆಚ್ಚು ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿ ಇರುತ್ತದೆ. ಹಾಗಾಗಿ ಬೆಳಗಿನ ತಿಂಡಿ ಬಹಳ ಮುಖ್ಯವಾಗುತ್ತದೆ.

Breakfast: ನಾವು  ಬೆಳಗಿನ ತಿಂಡಿಯ ವಿಚಾರದಲ್ಲಿ ಯಾವಾಗಲೂ ಗಮನಹರಿಸಬೇಕಾದ ಎರಡು ವಿಷಯಗಳಿವೆ. ಒಂದು ಆರೋಗ್ಯಕರ ತಿಂಡಿ ಹಾಗೂ  ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳು ಸೇರಿರುವ ಸಲಾಡ್ಗಳು. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ದೃಷ್ಟಿಯಿಂದ ಬೆಳಗಿನ ಉಪಹಾರದಲ್ಲಿ ಸಲಾಡ್ಗಳನ್ನು ಹೆಚ್ಚು ಸೇವನೆ ಮಾಡುತ್ತಿದ್ದಾರೆ. ಹಾಗಾದ್ರೆ ಬೆಳಗಿನ ಉಪಹಾರಕ್ಕೆ ಯಾವ ಸಲಾಡ್ಗಳು ಬೆಸ್ಟ್ ಇಲ್ಲಿದೆ. 
ಫ್ರೈಡ್ ಎಗ್ ಮತ್ತು ಗ್ರಿಲ್ಡ್ ಎಗ್ ಸಲಾಡ್
ಈ ಸಲಾಡ್ನಲ್ಲಿರುವ ಪೋಶಕಾಂಶಗಳು 281 ಕ್ಯಾಲೋರಿಗಳು,20 ಗ್ರಾಂ ಕೊಬ್ಬು,9.3 ಗ್ರಾಂ ಸ್ಯಾಚುರೇಟೆಡ್ ಕೊಬ್ಬು,844 ಮಿಗ್ರಾಂ ಸೋಡಿಯಂ,7 ಗ್ರಾಂ ಕಾರ್ಬ್ಸ್,1 ಗ್ರಾಂ ಫೈಬರ್,4 ಗ್ರಾಂ ಸಕ್ಕರೆ,17 ಗ್ರಾಂ ಪ್ರೋಟೀನ್ ಅಂಶಗಳು
ತರಕಾರಿಗಳನ್ನು ಉಪ್ಪು ಹಾಕಿ ಬೇಯಿಸಿ, ನಂತರ ಅದಕ್ಕೆ ಚಾಟ್ ಮಸಾಲ್ ಹಾಕಿ ಮಿಕ್ಸ್ ಮಾಡಿ. ಸರಿಯಾಗಿ ಮಿಶ್ರಣವಾದ ಮೇಲೆ, ಅದಕ್ಕೆ ಮೊಟ್ಟೆಯ ಹಳದಿ ಭಾಗವನ್ನು ಬೇಯಿಸಿ ಸೇರಿಸಿ.
ಬ್ಲ್ಯೂ ಬೆರ್ರಿ ಸಲಾಡ್
ಇದರಲ್ಲಿರುವ ಪೋಷಕಾಶಗಳು 228 ಕ್ಯಾಲೋರಿಗಳು,15 ಗ್ರಾಂ ಕೊಬ್ಬು,2.5 ಗ್ರಾಂ ಸ್ಯಾಚುರೇಟೆಡ್ ಕೊಬ್ಬು,55 ಮಿಗ್ರಾಂ ಸೋಡಿಯಂ,68 ಗ್ರಾಂ ಕಾರ್ಬ್ಸ್,14 ಗ್ರಾಂ ಫೈಬರ್,31 ಗ್ರಾಂ ಸಕ್ಕರೆ,14 ಗ್ರಾಂ ಪ್ರೋಟೀನ್
ಇನ್ನು ಬೆರ್ರಿ ಹಣ್ಣುಗಳು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದನ್ನು ಕಿತ್ತಳೆ ಹಣ್ಣು, ಹಾಗೂ ಬೇರೆ ವಿವಿಧ ಹಣ್ಣುಗಳೊಂದಿಗೆ  ಮತ್ತು ಸ್ವಲ್ಪ ತರಕಾರಿಗಳನ್ನು ಸೇರಿಸಿ ಸೇವನೆ ಮಾಡುವುದು ಉತ್ತಮ. ಇದನ್ನು ಸಿಹಿ ಸಲಾಡ್ ಅಥವಾ ಖಾರ ಸಲಾಡ್ ಎರಡು ವಿಧದಲ್ಲಿ ತಯಾರಿಸಬಹುದು.
ಗೆಣಸು ಮತ್ತು ಬಾದಾಮ್ ಸಲಾಡ್
ಈ ಸಲಾಡ್ನಿಂದ ದೇಹಕ್ಕೆ ಸೇರುವ ಪೋಷಕಾಂಶಗಳ ಪಟ್ಟಿ
80 ಕ್ಯಾಲೋರಿಗಳು,0 ಗ್ರಾಂ ಕೊಬ್ಬು,0 ಗ್ರಾಂ ಸ್ಯಾಚುರೇಟೆಡ್ ಕೊಬ್ಬು,93 ಗ್ರಾಂ ಸೋಡಿಯಂ,4.2 ಗ್ರಾಂ ಫೈಬರ್,4.5 ಗ್ರಾಂ ಸಕ್ಕರೆ,4 ಗ್ರಾಂ ಪ್ರೋಟೀನ್
ಗೆಣಸಿಗೆ ಸ್ವಲ್ಪ ಉಪ್ಪು ಹಾಕಿ ಸರಿಯಾಗಿ ಬೇಯಿಸಿ, ನಂತರ ಅದಕ್ಕೆ ನಿಮಗೆ ಬೇಕಾದ ತರಕಾರಿಯನ್ನು ಸೇರಿಸಿ ಬಾದಾಮಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಹಾಕಿ ಮಿಶ್ರಣ ಮಾಡಿ. ಇದಕ್ಕೆ ನೀವು ಬಾದಾಮಿ ಬೇಡ ಎಂದರೆ ಅದರಿಂದ ತಯಾರಾಗಿರುವ ಬೆಣ್ಣೆಯನ್ನು ಬಳಸಬಹುದು.
ದಾಳಿಂಬೆ ಸಲಾಡ್
ದಾಳಿಂಬೆ ಸಲಾಡ್ನಲ್ಲಿ ದೇಹಕ್ಕೆ ಬಹಳಷ್ಟು ಪೋಷಕಾಂಶಗಳು ಸಿಗುತ್ತದೆ. ಯಾವ ಯಾವ ಪೋಷಕಾಂಶಗಳು ಎಷ್ಟು ಸಿಗುತ್ತದೆ ಎಂಬ ಪಟ್ಟಿ ಇಲ್ಲಿದೆ.
05 ಕ್ಯಾಲೋರಿಗಳು,29 ಗ್ರಾಂ ಕೊಬ್ಬು,8.5 ಗ್ರಾಂ ಕೊಬ್ಬು,554 ಮಿಗ್ರಾಂ ಸೋಡಿಯಂ,23 ಗ್ರಾಂ ಕಾರ್ಬ್ಸ್,4 ಗ್ರಾಂ ಫೈಬರ್,13.5 ಗ್ರಾಂ ಸಕ್ಕರೆ,15 ಗ್ರಾಂ ಪ್ರೋಟೀನ್
ದಾಳಿಂಬೆ ಹಣ್ಣುಗಳನ್ನು ಹೆಚ್ಚಾಗಿ ಸಲಾಡ್ನಲ್ಲಿ ಬಳಕೆ ಮಾಡುತ್ತೇವೆ. ಅದಕ್ಕೆ ಉಪ್ಪು ಮತ್ತೆ ಚಾಟ್ ಮಸಾಲ ಹಾಕಿ ಸೇರಿಸಿದರೆ, ಅದರ ರುಚಿ ಅದ್ಭುತ.  ಅಷ್ಟೇ ಅಲ್ಲದೇ, ದಾಳಿಂಬೆ ಹಣ್ಣುಗಳ ಜೊತೆ, ಪಾಲಕ್ ಸೊಪ್ಪು ಮತ್ತು ಸ್ವಲ್ಪ ಬೇರೆ ತರಕಾರಿಗಳನ್ನು ಬೇಯಿಸಿ, ಅದಕ್ಕೆ ಮೊಟ್ಟೆಯನ್ನು ಹಾಕಿದರೆ, ಹೆಚ್ಚು ಆರೋಗ್ಯಕರವಾಗಿರುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಗೂ ಮುನ್ನ ಈ 9 ವಿಷಯಗಳು ಗೊತ್ತಿದ್ದರೆ ಲೈಫ್ ಸೂಪರ್ ಆಗಿರುತ್ತೆ