Publish Date: Fri, 18 Dec 2020 (08:38 IST)
Updated Date: Fri, 18 Dec 2020 (08:40 IST)
ನವದೆಹಲಿ : ಈರುಳ್ಳಿ ಸಲಾಡ್ ಗಾಗಿ ಕಾರ್ಮಿಕನೊಬ್ಬ ಮತ್ತೊಬ್ಬ ಕಾರ್ಮಿಕನನ್ನು ಚಾಕುವಿನಿಂದ ಚುಚ್ಚಿ ಗಾಯಗೊಳಿಸಿದ ಘಟನೆ ದಕ್ಷಿಣ ದೆಹಲಿಯ ಫತೇಪುರ ಬೇರಿಯಲ್ಲಿ ನಡೆದಿದೆ.
ದೆಹಲಿಯಲ್ಲಿ ವಲಸೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಆರೋಪಿ ಮತ್ತು ಸಂತ್ರಸ್ತ ಕಾರ್ಮಿಕರು ಗೋಡೌನ್ ಕೆಲಸಕ್ಕಾಗಿ ಫತೇಪುರ ಬೇರಿಯ ಫಾರ್ಮ್ ವೊಂದಕ್ಕೆ ಬಂದಿದ್ದಾರೆ. ಅಲ್ಲಿ ಈರುಳ್ಳಿ ಸಲಾಡ್ ವಿತರಣೆಯ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಆ ವೇಳೆ ಆರೋಪಿ ಕಾರ್ಮಿಕ ಸಂತ್ರಸ್ತನನ್ನು ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು 500ಕ್ಕೂ ಹೆಚ್ಚು ಕಾರ್ಮಿಕರನ್ನು ವಿಚಾರಣೆ ನಡೆಸಿ ಆರೋಪಿ ಕಾರ್ಮಿಕನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.