Publish Date: Sun, 30 Oct 2022 (13:11 IST)
Updated Date: Sun, 30 Oct 2022 (15:13 IST)
ಬೆಂಗಳೂರು : ನಾನು ಯಾರಿಗೂ ಹಣ ನೀಡುವಂತೆ ಸೂಚನೆ ಕೊಟ್ಟಿಲ್ಲ. ಇದು ಕಾಂಗ್ರೆಸ್ನ ಟೂಲ್ ಕಿಟ್ ನ ಮುಂದುವರೆದ ಭಾಗ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ನಡೆಯುತ್ತಿರುವ ಓಬಿಸಿ ಸಮಾವೇಶ ಹಿನ್ನೆಲೆಯಲ್ಲಿ ಕಲಬುರಗಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪತ್ರಕರ್ತರಿಗೆ ಸಿಎಂ ಕಚೇರಿಯಿಂದ ಹಣದ ಗಿಫ್ಟ್ ವಿಚಾರವಾಗಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದರು.
ಸುಳ್ಳು ಸೃಷ್ಟಿ ಮಾಡುವುದನ್ನೇ ಕಾಂಗ್ರೆಸ್ ಚಾಳಿ ಮಾಡಿಕೊಂಡಿದೆ. ನಾನು ಯಾರಿಗೂ ಗಿಫ್ಟ್ ಕೊಡುವಂತೆ ಸೂಚನೆ ಕೊಟ್ಟಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.