Publish Date: Sun, 23 Feb 2020 (12:05 IST)
Updated Date: Sun, 23 Feb 2020 (12:06 IST)
ಚಿಕ್ಕಮಗಳೂರು : ರಾಜ್ಯದಲ್ಲಿ ಪಾಕಿಸ್ತಾನದ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ್ರೋಹದ ಚಟುವಟಿಕೆಗೆ ಕ್ಷಮೆ ಇರಬಾರದು ಎಂದು ಸಚಿವ ಸಿಟಿ ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅವರ ಪರ ಯಾರೂ ಸಹ ವಕಾಲತ್ತು ವಹಿಸಬಾರದು. ಪಾಕಿಸ್ತಾನ ಜಿಂದಾಬಾದ್ ಅನ್ನೋದು ದೇಶಭಕ್ತಿನಾ? ಫ್ರೀ ಕಾಶ್ಮೀರ್ ಎಂದು ಕೂಗುವುದು ದೇಶಭಕ್ತಿನಾ? ಅಸ್ಸಾಂ ರಾಜ್ಯವನ್ನು ತುಂಡರಿಸುವುದು ದೇಶಭಕ್ತಿನಾ? ಇದೆಲ್ಲಾ ತುಕಡೆ ಗ್ಯಾಂಗ್ ಗಳು ಮಾಡುವಂತಹ ಕೆಲಸ ಎಂದು ಕಿಡಿಕಾರಿದ್ದಾರೆ.
ಅಲ್ಲದೇ ಭಾರತಕ್ಕೆ ಮುಜುಗರ ಉಂಟುಮಾಡಲು ಯತ್ನಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮುಜುಗರವಾಗಿದೆ . ಪಾಕಿಗಳನ್ನು ಖುಷಿ ಪಡಿಸುವ ಕೆಲಸ ಮಾಡುವವರಿಗೆ ನಮ್ಮ ದೇಶದಲ್ಲಿ ಏಕೆ ಅನ್ನವನ್ನು ಹಾಕಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.