Select Your Language

Notifications

webdunia
webdunia
webdunia
webdunia

ಬೆಂಗಳೂರಲ್ಲಿ ನೈಟ್ಕರ್ಫ್ಯೂ ಆ.30ರವರೆಗೆ ವಿಸ್ತರಣೆ: ಯಾವುದಕ್ಕೆಲ್ಲಾ ಅನುಮತಿ?

ಬೆಂಗಳೂರಲ್ಲಿ ನೈಟ್ಕರ್ಫ್ಯೂ ಆ.30ರವರೆಗೆ ವಿಸ್ತರಣೆ: ಯಾವುದಕ್ಕೆಲ್ಲಾ ಅನುಮತಿ?
ಬೆಂಗಳೂರು , ಬುಧವಾರ, 18 ಆಗಸ್ಟ್ 2021 (08:00 IST)
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸದ್ಯ ಜಾರಿಯಲ್ಲಿರುವ ನೈಟ್ ಕರ್ಫ್ಯೂವನ್ನು ಆಗಸ್ಟ್ 30 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಈ ತಿಂಗಳ ಅಂತ್ಯದವರೆಗೆ ನಗರದಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ರವರೆಗೆ ನೈಟ್ ಕರ್ಪ್ಯೂ ಜಾರಿಯಲ್ಲಿರಲಿದೆ. ನೈಟ್ ಕರ್ಫ್ಯೂ ವಿಸ್ತರಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ಆದರೆ ಏರ್ಪೋರ್ಟ್ ಸಂಚಾರ, ಅಗತ್ಯ- ಮೂಲಭೂತ ಸೌಕರ್ಯಗಳ ಸರಬರಾಜಿಗೆ ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ಕೊರೊನಾ 3ನೇ ಅಲೆ ಭೀತಿ ಇರುವುದರಿಂದ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ರಾತ್ರಿ ವೇಳೆ ಅನಗತ್ಯವಾಗಿ ರಸ್ತೆಗಿಳಿಯುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಕಮಿಷನರ್ ಎಚ್ಚರಿಸಿದ್ದಾರೆ.
ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದ್ದು, ಅಗತ್ಯ ವಸ್ತುಗಳ ಸರಬರಾಜು, ಏರ್ಪೋರ್ಟ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಇನ್ನು ಇಂದು ರಾಜ್ಯದಲ್ಲಿ  1,298 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿನಿಂದ ರಾಜ್ಯಾದ್ಯಂತ 32 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 1,833 ಸೋಂಕಿನಿಂದ ಗುಣಮುಖರಾಗಿದ್ದಾರೆ.
ಇತ್ತ ರಾಜಧಾನಿ ಬೆಂಗಳೂರಲ್ಲಿ ಒಂದೇ ದಿನ 340 ಮಂದಿ ಕೊರೊನಾ ರಿಪೋರ್ಟ್ ಪಾಸಿಟಿವ್ ಬಂದಿದೆ. 10 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಪಾಸಿಟಿವಿಟ್ 1.1 % ಹಾಗೂ ಸಾವಿನ ಪ್ರಮಾಣ 2.46 % ರಷ್ಟಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಜಗತ್ತಿನ ಚಿತ್ರವಿಚಿತ್ರ ಆಚರಣೆಗಳು