Webdunia - Bharat's app for daily news and videos

Install App

ಉಗ್ರರಿಗೆ ನೆರವಾಗುತ್ತಿದ್ದ ಎಎಸ್ಐ ಚಾಂದ್ ಪಾಷಾನನ್ನು ಅರೆಸ್ಟ್ ಮಾಡಿದ ಎನ್ಐಎ

Krishnaveni K
ಬುಧವಾರ, 9 ಜುಲೈ 2025 (11:53 IST)
Photo Credit: X
ಬೆಂಗಳೂರು: ಉಗ್ರರಿಗೆ ನೆರವು ನೀಡುತ್ತಿದ್ದ ಆರೋಪದ ಹಿನ್ನಲೆಯಲ್ಲಿ ಮೂವರನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ವಿಪರ್ಯಾಸವೆಂದರೆ ಇದರಲ್ಲಿ ಜನರಿಗೆ ರಕ್ಷಣೆ ಒದಗಿಸಬೇಕಾಗಿದ್ದ ಪೊಲೀಸ್ ಅಧಿಕಾರಿ ಚಾಂದ್ ಪಾಷಾ ಕೂಡಾ ಒಬ್ಬರಾಗಿದ್ದಾರೆ.

ಪರಪ್ಪನ ಅಗ್ರಹಾರದ ಎಎಸ್ಐ ಚಾಂದ್ ಪಾಷಾ ಬಂಧಿತ. ಈತನ ಜೊತೆಗೆ ಪರಪ್ಪನ ಅಗ್ರಹಾರದಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜ್ ಮತ್ತೊಬ್ಬ ಬಂಧಿತ. ಇನ್ನೋರ್ವ ಆರೋಪಿ ಜುನೈದ್ ತಲೆಮರೆಸಿಕೊಂಡಿದ್ದು ಆತನ ತಾಯಿಯನ್ನು ಆನಿಸ್ ಫಾತಿಮಾಳನ್ನು ಬಂಧಿಸಲಾಗಿದೆ.

ಬೆಂಗಳೂರು, ಕೋಲಾರ ಸೇರಿದಂತೆ ಐದು ಕಡೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಪರಪ್ಪನ ಅಗ್ರಹಾರದಿಂದ ಎರಡು ವಾಕಿಟಾಕಿಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದ ಪ್ರಸಂಗ ಇದಾಗಿದೆ.

ಇಂತಹ ಪೊಲೀಸ್ ಅಧಿಕಾರಿಯಿರುವ ಜೈಲಿನಲ್ಲಿ ಎಷ್ಟರಮಟ್ಟಿಗೆ ಭದ್ರತೆ, ಶಿಕ್ಷೆ ನಿರೀಕ್ಷಿಸಲು ಸಾಧ್ಯ ನೀವೇ ಊಹಿಸಿ. ಇದೀಗ ಎನ್ಐಎ ಅಧಿಕಾರಿಗಳು ಇವರನ್ನು ವಿಚಾರಣೆಗೊಳಪಡಿಸುತ್ತಿದ್ದು ಮತ್ತಷ್ಟು ಸ್ಪೋಟಕ  ವಿಚಾರಗಳು ಹೊರಬೀಳುವ ಸಾಧ್ಯತೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಪಿ ಯೋಗೇಶ್ವರ್ ಫ್ಯಾಮಿಲಿ ಮ್ಯಾಟರ್: ರಣದೀಪ್ ಸುರ್ಜೇವಾಲಗೆ ದೂರು ಕೊಟ್ಟ ಪತ್ನಿ

ರಾಜಸ್ಥಾನದ ಚುರುವಿನಲ್ಲಿ ವಾಯುಪಡೆಯ ಜಾಗ್ವಾರ್ ಫೈಟರ್ ಪತನ: ಪೈಲಟ್ ಸಾವು

ಗುಜರಾತ್‌: ಸೇತುವೆ ಮುರಿದು ನದಿಗೆ ಬಿದ್ದ ವಾಹನಗಳು, 9ಮಂದಿ ಸಾವು

ಮುಂಬೈ ದಾಳಿಯ ಮಾಸ್ಟರ್ ಮೈಂಡ್‌ ತಹವ್ವುರ್ ರಾಣಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ನಮ್ಮ ಪಕ್ಷದ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಬಿಕೆ ಹರಿಪ್ರಸಾದ್ ಗೆ ಟಾಂಗ್ ಕೊಟ್ಟ ವಿಜಯೇಂದ್ರ

ಮುಂದಿನ ಸುದ್ದಿ
Show comments