Webdunia - Bharat's app for daily news and videos

Install App

ಒಂದು ದಿನದ ಗಂಡು ನವಜಾತ ಶಿಶು ಪತ್ತೆ: ಸ್ಥಳೀಯರಿಂದ ರಕ್ಷಣೆ

Webdunia
ಭಾನುವಾರ, 23 ಸೆಪ್ಟಂಬರ್ 2018 (18:19 IST)
ಭೀಮಾನದಿಯ ಬ್ರಿಡ್ಜ್ ಬಳಿ ಒಂದು ದಿನದ ಗಂಡು ನವಜಾತ ಶಿಶು ಪತ್ತೆಯಾಗಿದೆ.

ಯಾದಗಿರಿ ಜಿಲ್ಲೆಯ ಭೀಮಾನದಿಯ ಬ್ರಿಡ್ಜ್ ಬಳಿ ಒಂದು ದಿನದ ಗಂಡು ನವಜಾತ ಶಿಶು ಪತ್ತೆಯಾಗಿದೆ. ಭೀಮಾನದಿಯ ಬ್ರಿಡ್ಜ್ ಕೆಳಗಡೆ ಒಂದು ದಿನದ ಗಂಡು ಮಗುವನ್ನು ಪೋಷಕರು ಬಟ್ಟೆಯಲ್ಲಿ ಸುತ್ತಿ ಬಿಸಾಡಿ ಹೋಗಿದ್ದರು. ಈ ವೇಳೆ ಮಗು ಅಳುತ್ತಿರುವ ಶಬ್ದ ಕೇಳಿದೆ. ಅಲ್ಲೇ ಇದ್ದ ಸಾರ್ವಜನಿಕರು ಸ್ವಲ್ಪ ದೂರ ಹೋಗಿ ನೋಡಿದ್ದಾರೆ.

ಈ ವೇಳೆ ಒಂದು ದಿನದ ಗಂಡು ಮಗು ಪತ್ತೆಯಾಗಿದೆ. ಬಳಿಕ ಸಾರ್ವಜನಿಕರು ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಮಕ್ಕಳ ರಕ್ಷಣಾಧಿಕಾರಿ ರೆಹಮಾನ್ ಹಾಗೂ ಸಿಬ್ಬಂದಿ ಶಿಶುವನ್ನು ರಕ್ಷಣೆ ಮಾಡಿ, ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಎಸ್‌ಎನ್‌ಸಿಯು ಕೇಂದ್ರದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಾದಗಿರಿ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments