Select Your Language

Notifications

webdunia
webdunia
webdunia
webdunia

ಶಿಕ್ಷಣ ಇಲಾಖೆಗೆ ಹೊಸ ವೆಬ್ ಸೈಟ್

ಶಿಕ್ಷಣ ಇಲಾಖೆಗೆ ಹೊಸ ವೆಬ್ ಸೈಟ್
bangalore , ಮಂಗಳವಾರ, 28 ಜೂನ್ 2022 (20:20 IST)
ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಇಲಾಖೆಯ ಸಮಸ್ಯೆಗಳು, ದೂರುಗಳನ್ನು ಇನ್ಮುಂದೆ ಯಾರು ಬೇಕಾದರು ನೇರವಾಗಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರಿಗೆ ತಿಳಿಸಬಹುದು. ಹೌದು ಪೋಷಕರು ಮತ್ತು ಸಾರ್ವಜನಿಕರು ನೀಡುವ ದೂರುಗಳಿಗೆ ಖುದ್ದು ಶಿಕ್ಷಣ ಸಚಿವರೇ ಉತ್ತರ ಕೊಡುವ ಕೆಲಸ ಮಾಡ್ತಾರೆ. ಸಾರ್ವಜನಿಕರ ಸಮಸ್ಯೆ ಆಲಿಸಲು, ದೂರು ಸ್ವೀಕಾರ ಮಾಡಲು ಪ್ರಾಥಮಿಕ ಶಿಕ್ಷಣ ಇಲಾಖೆ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಶಾಲಾ ಶಿಕ್ಷಣ ಇಲಾಖೆಗೆ ನೂತನವಾಗಿ ವೆಬ್ಸೈಟ್ ಪ್ರಾರಂಭ ಮಾಡಲು ನಿರ್ಧಾರ ಮಾಡಿದೆ. ಈಗಾಗಲೇ ವೆಬ್ಸೈಟ್ ಕೆಲಸ ನಡೆಯುತ್ತಿದ್ದು, ಶೀಘ್ರವೇ ಸಚಿವರು ಲೋಕಾರ್ಪಣೆ ಮಾಡಲಿದ್ದಾರೆ. ನೂತನ ವೆಬ್ಸೈಟ್ನಲ್ಲಿ ಸಾರ್ವಜನಿಕರು ದೂರು ನೀಡಲು ವಿಶೇಷ ಪೇಜ್ ಪ್ರಾರಂಭ ಮಾಡಲಾಗುತ್ತದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಯಾವುದು ದೂರನ್ನು ನೇರವಾಗಿ ಸಾರ್ವಜನಿಕರು ಇಲ್ಲಿಗೆ ಸಲ್ಲಿಸಬಹುದು. ಈ ದೂರನ್ನು ಖುದ್ದು ಶಿಕ್ಷಣ ಸಚಿವರೇ ನೋಡ್ತಾರೆ. ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡ್ತಾರೆ. ಅಷ್ಟೇ ಅಲ್ಲ ಸಮಸ್ಯೆ ಪರಿಹಾರಕ್ಕೆ ಟೀಂ ರಚನೆ ಮಾಡಲಿದ್ದು, ದೂರು ಇತ್ಯರ್ಥ ಆಗೋವರೆಗೂ ಈ ಟೀಂ ಕೆಲಸ ಮಾಡಲಿದೆ. ದೂರು ಪರಿಹಾರ ಆದ ಮೇಲೆ ಸಚಿವರ ಗಮನಕ್ಕೆ ಈ ಟೀಂ ತರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಜುಲೈ 1 ರಿಂದ ಮತ್ತೆ ವಿದ್ಯುತ್ ದರ ಏರಿಕೆ