Select Your Language

Notifications

webdunia
webdunia
webdunia
webdunia

ಪಠ್ಯ ಪುಸ್ತಕದ ವಿವಾದಕ್ಕೆ ತೆರೆಎಳೆದ ಶಿಕ್ಷಣ ಇಲಾಖೆ

ಪಠ್ಯ ಪುಸ್ತಕದ ವಿವಾದಕ್ಕೆ ತೆರೆಎಳೆದ ಶಿಕ್ಷಣ ಇಲಾಖೆ
bangalore , ಸೋಮವಾರ, 23 ಮೇ 2022 (21:12 IST)
ಪಠ್ಯ ಪುಸ್ತಕ ಗೊಂದಲ ಇನ್ನು ಬಗೆಹಾರಿಯುವಂತೆ ಕಾಣ್ತಿಲ್ಲ ವಾದ ವಿವಾದಗಳು ರಾಜಕೀಯ ಬಣ್ಣವನ್ನ ಪಡೆದುಕೊಳ್ತಿದೆ.ಹೀಗಾಗಿ ಸ್ವತಃ ಶಿಕ್ಷಣ ಸಚಿವರೇ ಗೊಂದಲಗಳಿಗೆ ತೆರೆಎಳೆಯುವ ಪ್ರಯತ್ನವನ್ನ ಮಾಡಿದ್ರು.ಈ ವರ್ಷ ಪಠ್ಯಪುಸ್ತಕದಲ್ಲಿ  ಬಾರಿ ಗದ್ದಲ- ಗೊಂದಲ ಸೃಷ್ಟಿಯಾಗಿದೆ.ಹಲವಾರು ಸಂಘಟನೆಗಳು ಪಠ್ಯಪುಸ್ತಕದ ಕಮಿಟಿ ವಿರುದ್ಧ ಅಸಾಮಾಧಾನ ಹೊರಹಾಕಿದ್ದಾರೆ.ಇನ್ನು ಇತ್ತಾ ರೋಹಿತ್ ಚಕ್ರತಿರ್ಥ ನೇತೃತ್ವದಲ್ಲಿ ಪಠ್ಯದಲ್ಲಿ ಹಲವು ಬದಲಾವಣೆಗಳಾಗಿದ್ದು, ಕೇಶವ್ ಹೆಗ್ಡೇವಾರ್ ಪಠ್ಯ ಸೇರ್ಪಡೆ ಮಾಡಿದ್ದಾರೆ.ಹಲವಾರು ಪ್ರಗತಿಪರ ಹೋರಾಟಗಾರರ, ಲೇಖಕರ ಪಠ್ಯವನ್ನ ತೆಗೆದು ಹಾಕಿದ್ದಾರೆ.ಸಾಮರಸ್ಯ ನಾಡಿನಲ್ಲಿ ಪಠ್ಯದಲ್ಲಿ ಕೇಸರಿಕಾರಣವಾಗಿದೆ.ರಾಜ್ಯ ಸರ್ಕಾರದ ಕುಮ್ಮಕಿನಿಂದ ಪಠ್ಯ ಕ್ರಮದಲ್ಲಿ ಬದಲಾವಣೆಯಾಗಿದೆ. ರೋಹಿತ್ ಚಕ್ರತಿರ್ಥ ಶಿಕ್ಷಣ ತಜ್ಞ ಅಲ್ಲ. ರಾಜಕೀಯ ಪ್ರೇರಿತವಾಗಿ ಕೇಸರಿಕಾರಣ ಮಾಡಲು ಮುಂದಾಗಿದ್ದಾರೆ ಎಂಬ ಹಲವಾರು ಆರೋಪಗಳು ಶಿಕ್ಷಣ ಇಲಾಖೆಯ ಮೇಲಿದೆ. ಹೀಗಾಗಿ ಈಗ ಪಠ್ಯ ಪುಸ್ತಕದಲ್ಲಿ ಮಾಡಿರುವ ಬದಲಾವಣೆ ಕೈ ಬಿಡಬೇಕು. ಇಲ್ಲವಾದಲ್ಲಿ ನಾವು ಹೋರಾಟ ಮಾಡಲು ಮುಂದಾಗ್ತೇವೆ ಎಂದು  ಕ್ಯಾಂಪಸ್ ಫ್ರಂಟ್ ನವರು ಆಗ್ರಹಿಸಿದಾರೆ. ಇನ್ನು ಇತ್ತಾ ಶಿಕ್ಷಣ ಸಚಿವರು ಉರಿಯುತ್ತಿರುವ ಜ್ವಾಲೆಯನ್ನ ನಾಂದಿಸುವ ಕೆಲಸ ಮಾಡಲು ಮುಂದಾಗಿದ್ದಾರೆ.
ಹೌದು ,ಶಿಕ್ಷಣ ಸಚಿವ ಬಿಸಿ ನಾಗೇಶ್ ಎಲ್ಲಾದಕ್ಕೂ ಸ್ಪಷ್ಟನೇ ನೀಡಲು ಮುಂದಾಗಿದ್ರು. ಶಿಕ್ಷಣ ಇಲಾಖೆಯ ಮೇಲೆ ಒಂದಲ್ಲ ಒಂದು ಅಪಾದನೆವರೆಸುತ್ತಿದ್ದಾರೆ.ಈ ಹಿಂದೆ ಬರಗೂರು ರಾಮಚಂದ್ರಪ್ಪನವರು 6 ಪಠ್ಯವನ್ನ ಕೈ ಬಿಟ್ರು ಆಗ ಯಾಕೆ ಮಾತಾಡಿಲ್ಲ. ಈಗ ಬುದ್ದಿಜೀವಿಗಳು ವಿಷಯ ತಿಳಿದುಕೊಳ್ಳದೆ ತುಂಬ ಮಾತಾಡ್ತಿದ್ದಾರೆ. ಇಲ್ಲಸಲ್ಲದ ಅಪಾದನೆ ಮಾಡ್ತಿದ್ದಾರೆ.  ಪಠ್ಯವನ್ನ ಕೈ ಬಿಟ್ಟಿಲ್ಲ. ಹೊಸ ಪಠ್ಯವನ್ನ ಸೇರಿಸಿದ್ರು ಹಳೆಯ ಪಠ್ಯವು ಇದೆ. ಪಠ್ಯ ಪುಸ್ತಕ ನೋಡಿಲ್ಲ.ಓದು ಇಲ್ಲ.ಆದ್ರು ಕೆಲ ರಾಜಕಾರಣಿಗಳು ಟ್ವೀಟ್ ಮಾಡ್ತಾರೆ.ಈಗ ಸತ್ಯ ನಿಜವಾಗ್ತಿದೆ. ನಾರಾಯಣಗುರು,ಭಗತ್ ಸಿಂಗ್ ,ಕ್ರಾಂತಿಕಾರಿ ಚಂದ್ರಶೇಖರ್ ಅಜಾದ್ ಸೇರಿದಂತೆ ಹಲವಾರು ಪಠ್ಯ ಪುಸ್ತಕದಲ್ಲಿದೆ. ಸುಮ್ಮನೇ ಸುಳ್ಳು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಾರಿದಾಡ್ತಿದೆ.ಶಿಕ್ಷಣ ಇಲಾಖೆ ಉತ್ತಮವಾಗಿ ಕೆಲಸ ಮಾಡ್ತಿದೆ .ಇದನ್ನ ಸಹಿದಲಾಗದ ಕಿಡಿಗೇಡಿಗಳು ಅನೇಕ ಅಪಾದನೆ ಹೊರೆಸಲು ಮುಂದಾಗಿದ್ದಾರೆ.ಪಠ್ಯ ಪುಸ್ತಕ ಕಮಿಟಿ ರಿಪೋರ್ಟ್ ಬರೋದಕ್ಕಿಂತ ಮುಂಚೆ ಟಿಪ್ಪು ಸುಲ್ತಾನ್ ಪಠ್ಯ ಕೈಬಿಟ್ಟಿದ್ದಾರೆ ಅಂದ್ರು.ಬಳಿಕ ಪ್ರಿಂಟ್ ಗೆ ಹೋಗುವಾಗ ಭಗತ್ ಸಿಂಗ್ ಪಾಠ ತೆಗೆದಿದ್ದಾರೆ ಅಂದ್ರು.ಬಳಿಕ ಬಸವಣ್ಣ, ನಾರಾಯಣ ಗುರು ,ಕುವೆಂಪು ವಿಚಾರ ತಂದ್ರು.ಆದ್ರೆ ಇಲ್ಲಿ‌ ಯಾವ ಬದಲಾವಣೆಯೂ ಆಗಿಲ್ಲ.ಇತಿಹಾಸದ ‌ಪುಸ್ತಕ ಹೆಚ್ಚು ಬರ್ಡನ್ ಆಗಿದೆ ಅಂತ ಹಿಂದೆಯಿಂದಲೂ‌ ಮಾತಿತ್ತು.ಹೀಗಾಗಿ‌ 10 ನೇ ತರಗತಿಯ ಇತಿಹಾಸದಿಂದ ಕನ್ನಡ ಭಾಷೆಗೆ ಪಠ್ಯ ಹಾಕಲಾಗಿದೆ.ಅಲ್ಲದೇ 6 ತರಗತಿಯಲ್ಲಿಯೂ ನಾರಾಯಣ ಗುರು ಪಠ್ಯ ಇದೆ.ಹೀಗಾಗಿ ನಾರಾಯಣ ಗುರು,ಭಗತ್ ಸಿಂಗ್,ಇನ್ನಿತರ ಕ್ರಾಂತಿಕಾರಿಗಳ ಬಗೆಗಿನ ಪಠ್ಯ ತೆಗೆದಿಲ್ಲ .ವಿಕಿಪೀಡಿಯದಲ್ಲು ಬೇಕಾದದನ್ನ ತೆಗೆದುಕೊಂಡಿದ್ದಾರೆ.ಉಳಿದದನ್ನ ತೆಗೆದುಕೊಂಡಿಲ್ಲ.ಹೀಗೆ ಯಾರೋ  ಶಡ್ಯಂತ್ರ ಮಾಡ್ತಿದ್ದಾರೆ ಎಂದು ಆರೋಪಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ಕಡಿತದ ಪರಿಣಾಮದಿಂದ ನಷ್ಟದಲ್ಲಿ ಸಿಲುಕಿದ ಹೊಟೇಲ್ ಉದ್ಯಮ