Select Your Language

Notifications

webdunia
webdunia
webdunia
webdunia

ಸಿಟಿಯಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡಲು ಹೊಸ ಪ್ಲ್ಯಾನ್..!

New Plan to Traffic Control in City
bangalore , ಮಂಗಳವಾರ, 14 ಜೂನ್ 2022 (20:47 IST)
ಟ್ರಾಫಿಕ್ ಅಂದ್ರೆ ಸಿಲಿಕಾನ್ ಸಿಟಿ ಜನರಿಗೆ ದೊಡ್ಡ ತಲೆನೋವಾಗಿದೆ. ಸಂಚಾರಿ ಪೊಲೀಸರು ಸಹ ವಾಹನ ದಟ್ಟಣೆಗೆ ಕಡಿವಾಣ ಹಾಕಲು ಹರಸಾಹಸ ಮಾಡ್ತಿದ್ದಾರೆ. ಆದ್ರೆ ಇದೀಗ  ಸರ್ಕಾರ KRDCL ಮುಖಾಂತರ ಸಿಟಿಯ 20% ಟ್ರಾಫಿಕ್ ಕಂಟ್ರೋಲ್ ಗೆ ನೂತನ ಯೋಜನೆಗೆ ಮುಂದಾಗಿದೆ.ಸಿಲಿಕಾನ್ ಸಿಟಿ ಅಂದ್ರೆ ತಟ್ಟ್ ಅಂತ ನೆನಪಾಗೋದು ಟ್ರಾಫಿಕ್ ಜಾಮ್. ಯಾರಪ್ಪ ಈ ಟ್ರಾಫಿನಲ್ಲಿ ಪ್ರಯಾಣ ಮಾಡ್ತರೆ ಅನ್ನೋದು ಇಲ್ಲಿ ಬಹುತೇಕ ಮಂದಿಯ ಚಿಂತೆ. ಈ ನಿಟ್ಟಿನಲ್ಲಿ ಟ್ರಾಫಿಕ್ ಜಾಮ್ ಕಂಟ್ರೋಲ್ ಮಾಡೋಕೆ ಅಂತ ಒಂದಿಲ್ಲಾ ಒಂದು ರೀತಿಯಲ್ಲಿ ಸರ್ಕಸ್ಸ್ ಮಾಡುತ್ತೆ. ಅದರಂತೆ ಇದೀಗ ಸರ್ಕಾರ ಮತ್ತೊಂದು ಹೊಸ ಯೋಜನೆಗೆ  ಕೈ ಹಾಕಿದೆ. ಬೆಂಗಳೂರಿನ ಸುತ್ತಮುತ್ತಲಿನ 154 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾರ್ಯ ಮಾಡೋದು. ಸಿಟಿ ಔಟ್ ಸ್ಕರ್ಟ್ ನಿಂದ ನೇರವಾಗಿ ಏರ್ ಪೋರ್ಟ್ ಗೆ ಸಂಪರ್ಕ ಕಲ್ಪೀಸೋದು.ಹೌದು ಮೈಸೂರು, ತುಮಕೂರು, ಹಾಸನ, ಆನೇಕಲ್, ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಅನಿವಾರ್ಯವಾಗಿ ನಗರ ಪ್ರದೇಶಿಸಬೇಕಿತ್ತು. ಇನ್ಮುಂದೆ ಹೊರಗಿನಿಂದ ಬಂದ ವಾಹನಗಳು ಏರ್‌ಪೋರ್ಟ್‌ಗೆ ಹೋಗಲು ನಗರ ಪ್ರವೇಶಿಸುವ ಅಗತ್ಯವೇ ಇಲ್ಲ. ಹೀಗಾಗಿ ನಗರದೊಳಗೆ ಟ್ರಾಫಿಕ್ ಸಮಸ್ಯೆ ಕಡಿವಾಣ ಹಾಕಬುದಾಗಿದೆ. ರಾಜ್ಯ ಸರ್ಕಾರ  KRDCL ಮೂಲಕ 154 ಕಿ.ಮೀ. ಉದ್ದದ ಸಪೋರ್ಟಿಂಗ್ ರಸ್ತೆಗಳ ನಿರ್ಮಾಣ ಮಾಡ್ತಿದೆ.  KRDCL ಸುಮಾರು 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಆರಂಭವಾಗಿದೆ. ಈ ಹೊಸ ಯೋಜನೆಗೆ ಸುಮಾರು 72 ಸಾವಿರ ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಕೆಲವೆಡೆ ಕಾಮಗಾರಿ ಕೊನೆಯ ಹಂತ ಕೂಡ ತಲುಪಿದೆ.

ಪ್ಯಾಕೇಜ್  - ರಸ್ತೆ ಉದ್ದ - ಮೊತ್ತ - ಎಲ್ಲಿಂದ ಎಲ್ಲಿಗೆ?  
• ಪ್ಯಾಕೇಜ್ 1  -  20.11 -  154.01- ಬೂದಿಗೆ ಕ್ರಾಸ್ ನಿಂದ ಏರ್ಪೋರ್ಟ್
• ಪ್ಯಾಕೇಜ್ 2 (ಎ) -  15.25 - 174.37 - ನೆಲಮಂಗಲದಿಂದ  ಮಧುರೆ 
• ಪ್ಯಾಕೇಜ್ 2 (ಬಿ) - 23.99 - 190.19 - ಮಧುರೆಯಿಂದ (NH 74)ದೇವನಹಳ್ಳಿ ರಸ್ತೆ (NH 7)     
• ಪ್ಯಾಕೇಜ್ -3 (ಎ)   33.20  -151.29 - ಬಿಡದಿಯಿಂದ ಜಿಗಣಿ
• ಪ್ಯಾಕೇಜ್ 3 (ಬಿ) -  22.98  - 154.48  - ಬನ್ನೇರುಘಟ್ಟದಿಂದ ಆನೇಕಲ್ ಬಳಿಯ ಬೆಸ್ತಮಾನಹಳ್ಳಿ   
• ಪ್ಯಾಕೇಜ್ 4  (ಎ) -  39. 28    -  204. - ಬೆಸ್ತಮಾನಹಳ್ಳಿ (SH-35) ಹೊಸಕೋಟೆ.
 ವಾಹನ ದಟ್ಟಣೆ ತಪ್ಪಿಸುವ ಉದ್ದೇಶದಿಂದ 1.96 ಕಿ  ಮೀ. ಉದ್ದದ ಎಲಿವೇಟೆಡ್ ಕಾರಿಡಾರ್‌ ಅನ್ನು 182.16 ಕೋಟಿ ವೆಚ್ಚದಲ್ಲಿ ನಿಲ್ದಾಣ ಮಾಡಲಾಗುತ್ತಿದೆ. 2024ರ ಜೂನ್ ವೇಳೆಗೆ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದ್ದು ಗೊಲ್ಲಹಳ್ಳಿ, ರಾಮಾನು ಕುಂಟೆ, ನಾರಾಯಣಪುರ, ಕಾಡುಗೋಡಿ ಬಳ್ಳಿ ರೈಲ್ವೆ ಮೇಲ್ವೇತುವೆ, ಬಸವನಹಳ್ಳಿ ಬಳಿ ವರ್ತೂರು ಕೋಡಿ ಸೇರಿದಂತೆ ಒಟ್ಟು ಮೂರು  ಅಭಿವೃದ್ಧಿ ಕಾರ್ಯ  ಭರದಿಂದ ಸಾಗ್ತಿದೆ.  ಸಿಟಿಯ  ಟ್ರಾಫಿಕ್ ಸಮಸ್ಯೆ ನಿವಾರಿಸಲು ಸರ್ಕಾರ ಸಿದ್ಧವಾಗಿದೆ. ಈ  ಬಹುಕೋಟಿ ಯೋಜನೆ  ಭರದಿಂದ ಸಾಗ್ತಿದೆ.ಈ ಯೋಜನೆ ಎಷ್ಟರ ಮಟ್ಟಿಗೆ ಟ್ರಾಫಿಕ್ ಜಾಮ್ ಗೆ ಕಡಿವಾಣ ಹಾಕಲು ಸಹಕಾರಿಯಾಗಲಿದೆ 

Share this Story:

Follow Webdunia kannada

ಮುಂದಿನ ಸುದ್ದಿ

ಗ್ಯಾಂಗ್ ಸ್ಟರ್ ಕರೆದೊಯ್ಯಲು 50 ಪೊಲೀಸರು, ಬುಲೆಟ್ ಪ್ರೂಫ್ ಕಾರುಗಳು!