ದಿನೇ ದಿನೇ ಕೊರೊನಾ ಪ್ರಕರಣ ಹೆಚ್ಚಳ ವಿಚಾರವಾಗಿ ಸದ್ಯಕ್ಕೆ ರಾಜ್ಯದಲ್ಲಿ ಆತಂಕ ಪಡುವ ಪರಿಸ್ಥಿತಿ ಇಲ್ಲ.ಮೈಸೂರಿನಲ್ಲಿ ಆರೋಗ್ಯ ಸಚಿವ ಡಾ ಎಸ್ ಸುಧಾಕರ್ ಹೇಳಿಕೆ ನೀಡಿದ್ದಾರೆ.
ಒಂದು ತರಗತಿಯಲ್ಲಿ 10 ರಿಂದ 12 ಮಕ್ಕಳಿಗೆ ಪಾಸಿಟಿವ್ ಆದರೆ ಆ ತರಗತಿಗೆ ಮಾತ್ರ ರಜೆ.ಆ ಪ್ರಮಾಣ ಹೆಚ್ಚಾದರೆ ಮಾತ್ರ ಒಂದು ವಾರ ಶಾಲೆಗೆ ರಜೆ.
ಕೊರೊನಾ ಪರೀಕ್ಷೆ ಹೆಚ್ಚಿಸುವ ಅಗತ್ಯತೆ ಕಾಣುತ್ತಿಲ್ಲ.ಮಕ್ಕಳಲ್ಲಿ ಇದರ ತೀವ್ರತೆ ತುಂಬಾ ಕಡಿಮೆಯಿದೆ.12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಕಡ್ಡಾಯವಾಗಿ ಹಾಕಿಸಿ.
ಕೇಂದ್ರದಿಂದ ಯಾವುದೇ ಸೂಚನೆ ಬಂದಿಲ್ಲ.ಮಾಸ್ಕ್ ಕಡ್ಡಾಯವಾಗಿ ಧರಿಸಿದರೆ ಒಳ್ಳೆಯದು.ಮತ್ತೆ ರಾಜ್ಯದಲ್ಲಿ ಲಸಿಕೆ ಅಭಿಯಾನ ಆರಂಭಿಸಲಾಗುವುದೆಂದು
ಮೈಸೂರಿನಲ್ಲಿ ಸಚಿವ ಡಾ ಸುಧಾಕರ್ ಹೇಳಿಕೆ ನೀಡಿದ್ದಾರೆ