Select Your Language

Notifications

webdunia
webdunia
webdunia
webdunia

ಸಿಎಂ ಕೊಠಡಿಗೆ ಹೊಸ ರೂಪ: ಸಮಾಜವಾದಿ ಮುಖವಾಡದ ಮಜಾವಾದಿ ಸಿದ್ದರಾಮಯ್ಯ

Chief Minister Siddaramaiah

Sampriya

ಬೆಂಗಳೂರು , ಶನಿವಾರ, 16 ನವೆಂಬರ್ 2024 (17:00 IST)
ಬೆಂಗಳೂರು: ವಿಧಾನಸೌಧದಲ್ಲಿನ ಮೂರನೇ ಮಹಡಿಯಲ್ಲಿನ ಮುಖ್ಯಮಂತ್ರಿಗಳ ಕೊಠಡಿಯನ್ನು ಕೋಟಿ ಕೋಟಿ ವೆಚ್ಚದಲ್ಲಿ ನವೀಕರಣ ಮಾಡಿದ್ದಕ್ಕೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಹಲವು ಪ್ರಶ್ನೆಗಳನ್ನು ಸಿಎಂ ಮುಂದೆ ಇಟ್ಟಿದ್ದಾರೆ.

ಈ ಬಗ್ಗೆ ಜೆಡಿಎಸ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿ ಸಮಾಜವಾದಿ ಮುಖವಾಡದ "ಮಜಾವಾದಿ ಸಿದ್ದರಾಮಯ್ಯ ಎಂದು ವ್ಯಂಗ್ಯ ಮಾಡಿದೆ.

ಜೆಡಿಎಸ್‌ ಪೋಸ್ಟ್‌ನಲ್ಲಿ ಹೀಗಿದೆ: ಸಮಾಜವಾದಿ ಮುಖವಾಡದ "ಮಜಾವಾದಿ ಸಿದ್ದರಾಮಯ್ಯ" !

ಭ್ರಷ್ಟಾಚಾರದಲ್ಲಿ "ಸಿದ್ಧ" ಹಸ್ತರಾದ ಸಿದ್ದರಾಮಯ್ಯ  ಅಹಿಂದ ವೇಷತೊಟ್ಟು ರಾಜ್ಯದ ಜನರಿಗೆ ವಂಚಿಸುತ್ತಲೇ ಇದ್ದಾರೆ.


ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಲು "ಕೈಲಾಗದ" ಸಿಎಂ ಸಿದ್ದರಾಮಯ್ಯ , ವಿಧಾನಸೌಧದಲ್ಲಿರುವ ಅವರ 323ನೇ ಕೊಠಡಿ ನವೀಕರಣಕ್ಕೆ ಕೋಟಿ ಕೋಟಿ ದುಂದು ವೆಚ್ಚ ಮಾಡಿದ್ದಾರೆ.

ಸರಳತೆ, ಸಮಾಜವಾದ ಎನ್ನುತ್ತಲೇ ಐಷಾರಾಮಿ ಜೀವನ ನಡೆಸುವುದು ಕಾಂಗ್ರೆಸ್‌ ಪಕ್ಷದ ನಾಯಕರಿಗೆ ಕರಗತವಾಗಿದೆ.

2.5 ಕೋಟಿಗೂ ಹೆಚ್ಚು ದುಂದುವೆಚ್ಚ ಮಾಡಿ ಮುಖ್ಯಮಂತ್ರಿ ಕಚೇರಿಯನ್ನು ಕಾರ್ಪೊರೇಟ್‌ ಶೈಲಿಯಲ್ಲಿ ನವೀಕರಿಸಿ, ಕಾರ್ಪೊರೇಟ್‌ ಸಿಎಂ ಆಗಿ ಬದಲಾಗಿದ್ದಾರೆ.

ಸಮಾಜವಾದಿ ಎಂದು ಬಿಂಬಿಸಿಕೊಳ್ಳುವ ನಿಮಗೆ ಜನರ ತೆರಿಗೆ ಹಣದಲ್ಲಿ ಇಷ್ಟೊಂದು ಐಷಾರಾಮಿ ನವೀಕರಣ ಬೇಕಿತ್ತಾ ? ಇದಕ್ಕೆ ನಿಮ್ಮ ಆತ್ಮಸಾಕ್ಷಿ ಏನು ಹೇಳುತ್ತದೆ ?

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪ ಮಕ್ಕಳು ಇದನ್ನೇ ಮಾಡೋದು, ಯಡಿಯೂರಪ್ಪ ಪುತ್ರನ ವಿರುದ್ಧ ಯತ್ನಾಳ್ ಮತ್ತೆ ಕಿಡಿ ಕಿಡಿ