Select Your Language

Notifications

webdunia
webdunia
webdunia
Sunday, 13 April 2025
webdunia

ಬ್ರ್ಯಾಂಡ್‌ ಬೆಂಗಳೂರು ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಲೂಟಿ

Congress Government, JDS X Post, Brand Bengaluru,

Sampriya

ಬೆಂಗಳೂರು , ಶುಕ್ರವಾರ, 15 ನವೆಂಬರ್ 2024 (14:44 IST)
Photo Courtesy X
ಗುಂಡಿಬಿದ್ದ ರಸ್ತೆಗಳಿಗೆ ತೇಪೆ ಕೂಡ ಹಾಕಿಸದ ಬೆಂಗಳೂರು ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್‌ ಬಿಟ್ಟಿ ಪ್ರಚಾರ ಪಡೆಯುತ್ತಿರುವುದು ಬಿಟ್ಟರೆ, ಬೆಂಗಳೂರಿಗರಿಗೆ ಯಮಗುಂಡಿಗಳಿಂದ ಇನ್ನೂ ಮುಕ್ತಿ ಕೊಡಿಸಿಲ್ಲ ಎಂದು ಜೆಡಿಎಸ್ ಆರೋಪ ಮಾಡಿದೆ.    

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಜೆಡಿಎಸ್‌, ರಾಜಧಾನಿಯ ಯಾವುದೇ ರಸ್ತೆಗಳಿಗೂ ಹೋದರೂ ನೂರಾರು ಗುಂಡಿಗಳು ಅನಾಹುತಕ್ಕೆ ಆಹ್ವಾನಿಸುತ್ತಿದೆ. ವಾಹನ ಸವಾರರು ಜೀವ ಕೈಯಲ್ಲಿಡಿದು ಓಡಾಡಬೇಕಾದ ನರಕವನ್ನು ಸಿದ್ದರಾಮಯ್ಯ  ಸರ್ಕಾರ ತಂದಿಟ್ಟಿದೆ.  

ಬ್ರ್ಯಾಂಡ್‌ ಬೆಂಗಳೂರು ಹೆಸರಲ್ಲಿ ಮೇಯುತ್ತಿರುವ ಕಲೆಕ್ಷನ್‌ ಗಿರಾಕಿ ಪರ್ಸಂಟೇಜ್‌ ಲೆಕ್ಕದಲ್ಲಿ ಲೂಟಿಹೊಡೆಯುತ್ತಿದ್ದು,  659 ಕೋಟಿ ಹಣದಲ್ಲಿ ಜೇಬಿಗಿಳಿಸಿಕೊಂಡಿದ್ದು ಎಷ್ಟು ?   

ತೇಪೆ ಹಚ್ಚಲು ಕಾಂಗ್ರೆಸ್‌ ಸರ್ಕಾರಕ್ಕೆ ಯೋಗ್ಯತೆ ಇಲ್ಲವೇ..? ಬೆಂಗಳೂರಿನ ರಸ್ತೆಗಳ ಡಾಂಬರೀಕರಣ ಮಾಡುವುದು ಇರಲಿ, ತೇಪೆ ಹಾಕಲು ಬೊಕ್ಕಸದಲ್ಲಿ ಹಣವಿಲ್ಲವೇ ?

"ಕಮಿಷನ್‌ ಕಾಂಗ್ರೆಸ್‌  ಸರ್ಕಾರ"ಕ್ಕೆ  "ಬ್ರ್ಯಾಂಡ್‌ ಬೆಂಗಳೂರು" ಎಂಬುದು 2028ರ ಚುನಾವಣೆಗೆ ಹಣ ದೋಚುವ ಯೋಜನೆಯಾಗಿಬಿಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಮೀರ್‌ಗೆ ಕುಳ್ಳ ಎಂದು ಯಾವತ್ತೂ ಕರೆದಿಲ್ಲ: ಕರಿಯಾ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು