Select Your Language

Notifications

webdunia
webdunia
webdunia
webdunia

ಬೊಮ್ಮಾಯಿ ಸಂಪುಟದ ಸಂಭಾವ್ಯ ಸಚಿವರ ಹೊಸ ಪಟ್ಟಿ

ಬೊಮ್ಮಾಯಿ ಸಂಪುಟದ ಸಂಭಾವ್ಯ ಸಚಿವರ ಹೊಸ ಪಟ್ಟಿ
ಬೆಂಗಳೂರು , ಬುಧವಾರ, 4 ಆಗಸ್ಟ್ 2021 (08:51 IST)
ಬೆಂಗಳೂರು(ಆ. 04): ಮೂರು ನಾಲ್ಕು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟು ಸಂಪುಟ ಪಟ್ಟಿ ಅಂತಿಮಗೊಳಿಸಿಕೊಂಡು ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿಗೆ ಮರಳಿದ್ದಾರೆ. ಇಂದು ಮಧ್ಯಾಹ್ನ 2:15ಕ್ಕೆ ನೂತನ ಮಂತ್ರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ.

ರಾಜಭನವದ ಗಾಜಿನಮನೆಯಲ್ಲಿ ಈ ಕಾರ್ಯಕ್ರಮಕ್ಕಾಗಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇನ್ನು, ವರಿಷ್ಠರು ಸಂಪುಟ ಪಟ್ಟಿ ಅಂತಿಮಗೊಳಿಸಿದ್ದರೂ ಕೆಲ ಬದಲಾವಣೆಗಳಾಗುವ ಸಾಧ್ಯತೆ ಇದೆ. ಹಲವು ಆಕಾಂಕ್ಷಿಗಳು ಕೊನೆಯ ಕ್ಷಣದವರೆಗೂ ಪ್ರಯತ್ನ ಮುಂದುವರಿಸುತ್ತಿದ್ದಾರೆ.
ಇದೇ ವೇಳೆ, ಕೆಲ ಸಚಿವರಿಗೆ ನಿನ್ನೆ ರಾತ್ರಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಡೆಯಿಂದ ಪ್ರಮಾಣ ವಚನಕ್ಕೆ ಸಿದ್ಧರಾಗುವಂತೆ ಕರೆ ಬಂದಿದೆ. ಬಿ ಸಿ ಪಾಟೀಲ್, ಪೂರ್ಣಿಮಾ ಶ್ರೀನಿವಾಸ್ ಮೊದಲಾದವರು ತಮಗೆ ಕರೆ ಬಂದಿರುವುದನ್ನು ಖಚಿತಪಡಿಸಿದ್ದಾರೆ. ನ್ಯೂಸ್18 ಕನ್ನಡಕ್ಕೆ ಸಂಭಾವ್ಯ ಸಚಿವರ ಹೊಸ ಪಟ್ಟಿ ಸಿಕ್ಕಿದ್ದು, ಅದರಲ್ಲಿರುವ ಪ್ರಕಾರ ಮುನಿರತ್ನ, ಅರಗ ಜ್ಞಾನೇಂದ್ರ, ಕೆ ಪಿ ಮಾಧುಸ್ವಾಮಿ, ಆರ್ ಅಶೋಕ್ ಮೊದಲಾದವರ ಹೆಸರು ಇದೆ. ಸಂಪುಟದಿಂದ ಹೊರಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದ ಕೆ ಎಸ್ ಈಶ್ವರಪ್ಪ ಅವರನ್ನ ಸಂಪುಟದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಈಶ್ವರಪ್ಪ ಪರವಾಗಿ ಪ್ರಭಾವಿ ಆರೆಸ್ಸೆಸ್ ನಾಯಕರೊಬ್ಬರು ಶಿಫಾರಸು ಮಾಡಿರುವುದು ತಿಳಿದುಬಂದಿದೆ.
ಇನ್ನು, ಸ್ಪೀಕರ್ ಹುದ್ದೆ ಸಾಕಾಗಿದೆ. ಸಚಿವ ಸ್ಥಾನ ಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಮಾಡಿಕೊಂಡ ಮನವಿಯನ್ನೂ ಪರಿಗಣಿಸಲಾಗಿರುವುದು ತಿಳಿದುಬಂದಿದೆ. ಅವರ ಹೆಸರು ಸಂಭಾವ್ಯರ ಪಟ್ಟಿಯಲ್ಲಿದೆ. ಹಿರಿಯ ನಾಯಕರ ಪೈಕಿ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಪ್ರಭು ಚವ್ಹಾಣ್, ವಿ ಸೋಮಣ್ಣ, ಶಶಿಕಲಾ ಜೊಲ್ಲೆ ಅವರನ್ನ ಸಂಪುಟದಿಂದ ಕೈಬಿಡುವುದು ಬಹುತೇಕ ಖಚಿತವಾಗಿದೆ. ಶೆಟ್ಟರ್ ಈಗಾಗಲೇ ತಾನು ಮಂತ್ರಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿಯಾಗಿದೆ. ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದ ಅರವಿಂದ್ ಬೆಲ್ಲದ್ ಅವರಿಗೆ ಮಂತ್ರಿ ಸ್ಥಾನವೂ ದಕ್ಕಿದಂತಿಲ್ಲ. ಅವರ ಬದಲು ಶಂಕರ ಪಾಟೀಲ ಮುನೇನಕೊಪ್ಪ ಅವರನ್ನ ಮಂತ್ರಿಮಂಡಳಕ್ಕೆ ಸೇರಿಸಲು ನಿರ್ಧರಿಸಬಹುದು. ಕಳೆದ ಕ್ಯಾಬಿನೆಟ್ನಲ್ಲಿ ಮಂತ್ರಿ ಸ್ಥಾನ ಇಲ್ಲದೆ ನಿರಾಶೆಗೊಂಡಿದ್ದ ಮುನಿರತ್ನಗೆ ಈ ಬಾರಿ ಚಾನ್ಸ್ ಒಲಿದುಬಂದಂತಿದೆ. ಶಶಿಕಲಾ ಜೊಲ್ಲೆ ಬದಲು ಪೂರ್ಣಿಮಾ ಶ್ರೀನಿವಾಸ್ಗೆ ಮಣೆಹಾಕಲಾಗಿದೆ.
ಯಡಿಯೂರಪ್ಪ ವಿರೋಧದ ಮಧ್ಯೆಯೂ ಸಿ ಪಿ ಯೋಗೇಶ್ವರ್ ಅವರಿಗೆ ಅವಕಾಶ ಸಿಗಬಹುದು. ಇನ್ನು, ವರಿಷ್ಠರು ಅಳೆದು ತೂಗಿ ಬಿ ವೈ ವಿಜಯೇಂದ್ರ ಅವರಿಗೆ ಮಂತ್ರಿ ಭಾಗ್ಯ ಕಲ್ಪಿಸುವ ನಿರೀಕ್ಷೆ ಇದೆ. ಬಿಎಸ್ವೈ ಸಂಪುಟದಲ್ಲಿ ಇಲ್ಲದ ದತ್ತಾತ್ರೇಯ ಪಾಟೀಲ ರೇವೂರ, ಎಸ್ ಅಂಗಾರ, ಸುನೀಲ್ ಕುಮಾರ್, ಅರಗ ಜ್ಞಾನೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಾಲಚಂದ್ರ ಜಾರಕಿಹೊಳಿ, ಮುನಿರತ್ನ ಮತ್ತು ಶಂಕರ್ ಪಾಟೀಲ ಮುನೇನಕೊಪ್ಪ, ಪೂರ್ಣಿಮಾ ಶ್ರೀನಿವಾಸ್, ಬಿ ವೈ ವಿಜಯೇಂದ್ರ ಅವರು ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನ್ನಲಾಗಿದೆ.
ಬೊಮ್ಮಾಯಿ ಸಂಪುಟದ ಸಂಭಾವ್ಯ ಸಚಿವರ ಹೊಸ ಪಟ್ಟಿ:
ಕೆ ಎಸ್ ಈಶ್ವರಪ್ಪಆರ್ ಅಶೋಕ್
ಡಾ. ಅಶ್ವಥ ನಾರಾಯಣ
ಎಸ್ ಟಿ ಸೋಮಶೇಖರ್
ಭೈರತಿ ಬಸವರಾಜು
ಸಿ ಪಿ ಯೋಗೇಶ್ವರ
ಡಾ. ಸುಧಾಕರ್
ಬಿ ಶ್ರೀರಾಮುಲು
ಕೆ ಪಿ ಮಾಧುಸ್ವಾಮಿ
ಪೂರ್ಣಿಮಾ ಶ್ರೀನಿವಾಸ್
ಉಮೇಶ್ ಕತ್ತಿ
ರಾಜುಗೌಡ ಪಾಟೀಲ್
ಮುರುಗೇಶ್ ನಿರಾಣಿ
ಆನಂದ್ ಸಿಂಗ್
ಬಿ ವೈ ವಿಜಯೇಂದ್ರ
ಅರಗ ಜ್ಞಾನೇಂದ್ರ
ಎಂ ಪಿ ಕುಮಾರಸ್ವಾಮಿ
ದತ್ತಾತ್ರೇಯ ಪಾಟೀಲ್ ರೇವೂರ
ಕೆ ಗೋಪಾಲಯ್ಯ
ಬಾಲಚಂದ್ರ ಜಾರಕಿಹೊಳಿ
ಶಿವರಾಂ ಹೆಬ್ಬಾರ್
ಬಿ ಸಿ ಪಾಟೀಲ್
ಎಸ್ ಅಂಗಾರ
ಸುನೀಲ್ ಕುಮಾರ್
ನಾರಾಯಣಗೌಡ
ವಿಶ್ವೇಶ್ವರ ಹೆಗಡೆ ಕಾಗೇರಿ
ಮುನಿರತ್ನ
ಶಂಕರ ಪಾಟೀಲ ಮುನೇನಕೊಪ್ಪ


Share this Story:

Follow Webdunia kannada

ಮುಂದಿನ ಸುದ್ದಿ

ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗಗಳಿಗೆ 10% ಮೀಸಲು ಏಕೆ, ಹೇಗೆ ಜಾರಿಯಾಗಬೇಕು?