Select Your Language

Notifications

webdunia
webdunia
webdunia
webdunia

ಬೊಮ್ಮಾಯಿ ಸಂಪುಟದಲ್ಲಿ ವಿಜಯೇಂದ್ರಗೆ ಸಚಿವ ಸ್ಥಾನ : ವರಿಷ್ಠರ ತೀರ್ಮಾನ?

ಬೊಮ್ಮಾಯಿ ಸಂಪುಟದಲ್ಲಿ ವಿಜಯೇಂದ್ರಗೆ ಸಚಿವ ಸ್ಥಾನ : ವರಿಷ್ಠರ ತೀರ್ಮಾನ?
ಬೆಂಗಳೂರು , ಮಂಗಳವಾರ, 3 ಆಗಸ್ಟ್ 2021 (11:49 IST)
ಬೆಂಗಳೂರು (ಆ.03): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುತ್ರ  ಬಿ ವೈ ವಿಜಯೇಂದ್ರ ಅವರು ಸಚಿವರಾಗುತ್ತಾರಾ ಎಂಬ ಚರ್ಚೆ  ಕೇಳಿ ಬಂದಿದೆ.

ಇದುವರೆಗೆ ಬಿ ವೈ ವಿಜಯೇಂದ್ರ ಅವರು  ಹೆಸರು ಪ್ರಸ್ತಾಪವಾಗಿಲ್ಲದೇ ಇದ್ದರು ಸೋಮವಾರ ಬೊಮ್ಮಾಯಿ ಅವರು ಸಂಪುಟ ರಚನೆಯನ್ನು ಅಂತಿಮಗೊಳಿಸುವ ಹಂತದಲ್ಲಿದ್ದ ವೇಳೆ ಈ ವಿಷಯ ಪ್ರಸ್ತಾಪವಾಗಿದೆ.
•ಬೊಮ್ಮಾಯಿ ಸಂಪುಟದಲ್ಲಿ ವಿಜಯೇಂದ್ರಗೆ ಸಚಿವ ಸ್ಥಾನ
•ಬಿಎಸ್ವೈ ವಿಶ್ವಾಸಕ್ಕಾಗಿ ಸಚಿವ ಸ್ಥಾನ ನೀಡಲು ನಿರ್ಧಾರ
  ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿರುವ ಬಿ ಎಸ್ ಯಡಿಯೂರಪ್ಪ ಅವರ ಬೆಂಬಲವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಅವರ ಪುತ್ರ ವಿಜಯೇಂದ್ರ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆಯಾದರು  ಈ ಬಗ್ಗೆ ಬಿಜೆಪಿ ಮೂಲಗಳು ಖಚಿತಪಡಿಸಿಲ್ಲ.
ಈ ಮಧ್ಯೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಬಿ ವೈ ವಿಜಯೇಂದ್ರ ಸಚಿವ ಸಂಪುಟ ಸೇರ್ಪಡೆ ಕುರಿತು  ಪ್ರಶ್ನೆಗೆ ನೇರವಾಗಿ ಉತ್ತರಿಸಿದೇ ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕುರಿತು  ಭಾರತೀಯ ಜನತಾ ಪಕ್ಷದ  ಹೈ ಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
 ನೂತನ ಸರ್ಕಾರದ ಸಚಿವ ಸಂಪುಟ ರಚನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಪಕ್ಷದ ಹೈಕಮಾಂಡ್  ಇಂದು ರಾತ್ರಿ ವೇಳೆಗೆ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸೋಮವಾರ ರಾತ್ರಿ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಚಿವ ಸಂಪುಟ ರಚನೆ ಕುರಿತು ಬೊಮ್ಮಾಯಿ ವಿಸ್ತೃತವಾಗಿ ಚರ್ಚೆ ನಡೆಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಚೀನಾದಲ್ಲಿ ಹಂದಿಗಳಿಗೆ ಹೈಸೆಕ್ಯುರಿಟಿ!?