ನ್ಯೂ ಇಂಡಿಯಾ ಸಮ್ಮಿಟ್- 2018ಕ್ಕೆ ಅದ್ಧೂರಿ ಚಾಲನೆ

ಗುರುವಾರ, 6 ಡಿಸೆಂಬರ್ 2018 (17:23 IST)
ದೇಶದ ಸಾವಿರಕ್ಕೂ ಅಧಿಕ ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿ ಆಯೋಜಿಸಿರುವ ಸಮಾವೇಶವಾಗಿರುವ ನ್ಯೂ ಇಂಡಿಯಾ ಸಮ್ಮಿಟ್- 2018ಕ್ಕೆ ಚಾಲನೆ ನೀಡಲಾಗಿದೆ.

ಕ್ರೆಡಾಯ್ ಸಂಸ್ಥೆಯಿಂದ ಸಮಾವೇಶ ಆಯೋಜನೆಗೊಂಡಿರುವುದನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಉದ್ಘಾಟನೆ ಮಾಡಿದರು.

ದೇಶದ ಸಾವಿರಕ್ಕೂ ಅಧಿಕ ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿ ಆಯೋಜಿಸಿರುವ "ಬೆಳೆಯುತ್ತಿರುವ ನಗರಗಳು, ಭಾರತದ ಭವಿಷ್ಯ" ಧ್ಯೇಯದಡಿ ಎರಡು ದಿನಗಳ ಸಮಾವೇಶಕ್ಕೆ ಅದ್ಧೂರಿ ಚಾಲನೆ ದೊರೆತಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ ಸಮಾವೇಶ ನಡೆಯುತ್ತಿದೆ.
ಸಚಿವರಾದ ಯು.ಟಿ.ಖಾದರ್, ಜಿ.ಟಿ.ದೇವೇಗೌಡ, ಶಾಸಕರಾದ ತನ್ವೀರ್ ಸೇಠ್, ಎಸ್.ಎ.ರಾಮದಾಸ್, ಸಂಸದ ಪ್ರತಾಪ್ ಸಿಂಹ, ಮೇಯರ್ ಪುಷ್ಪಲತಾ ಜಗನ್ನಾಥ್, ಕೆಎಸ್‌ಒಯು ಪ್ರೊ.ಶಿವಲಿಂಗಯ್ಯ, ಕ್ರೆಡಾಯ್ ಅಧ್ಯಕ್ಷ ಬಾಲಕೃಷ್ಣ ಹೆಗಡೆ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಹಿಳಾ ಪೊಲೀಸರು ಸೈಕಲ್ ಜಾಥಾ ನಡೆಸಿದ್ಯಾಕೆ?