Publish Date: Thu, 22 Aug 2019 (19:43 IST)
Updated Date: Thu, 22 Aug 2019 (19:50 IST)
ಸ್ಯಾಂಡಲ್ ವುಡ್ ನಟಿ ಶ್ರುತಿಹರಿಹರನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮೀ ಟೂ ಆರೋಪ ಮಾಡುವ ಮೂಲಕ ಚಿತ್ರರಂಗದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದ್ದ ನಟಿಗೆ ಹಿನ್ನಡೆಯಾಗಿದೆ.
ನಟಿ ಶ್ರುತಿ ಹರಿಹರನ್ ತಮ್ಮ ವಿರುದ್ಧ ದಾಖಲಾಗಿರೋ ಮಾನನಷ್ಟ ಕೇಸನ್ನು ರದ್ದು ಮಾಡುವಂತೆ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಆದರೆ ನಟ ಅರ್ಜುನ್ ಸರ್ಜಾ ಪರವಾಗಿ ಚಿತ್ರನಟ ಧೃವ ಸರ್ಜಾ ಸಲ್ಲಿಕೆ ಮಾಡಿರೋ ಮಾನನಷ್ಟ ಕೇಸ್ ನ್ನು ರದ್ದು ಮಾಡಲು ಕೋರ್ಟ್ ನಿರಕಾರಣೆ ಮಾಡಿದೆ.
ತಮ್ಮ ವಿರುದ್ಧ ದಾಖಲಾಗಿರೋ ಕೇಸ್ ನ್ನ ರದ್ದು ಮಾಡುವಂತೆ ಮನವಿ ಮಾಡಿ ಸಿಟಿ ಸಿವಿಲ್ ಕೋರ್ಟಿಗೆ ನಟಿ ಅರ್ಜಿ ಸಲ್ಲಿಸಿದ್ದರು. ಆದರೆ ನಟಿ ಶ್ರುತಿ ಹರಿಹರ್ ನೆ ಹಿನ್ನಡೆಯಾಗಿದೆ.