Select Your Language

Notifications

webdunia
webdunia
webdunia
webdunia

ತಿಂಗಳಾದ್ರೂ ಮುಗಿದಿಲ್ಲ ನೆಲಮಂಗಲ ಫ್ಲೈಯೋವರ್ ದುರಸ್ತಿ

Crime
ನಿಧಾನಗತಿಯಲ್ಲಿ ಸಾಗಿದ ಪೀಣ್ಯಾ ಎಲಿವೇಟೆಡ್ ಫ್ಲೈ ಓವರ್ ದುರಸ್ತಿ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದು, ಟ್ರಾಫಿಕ್​ ಸಮಸ್ಯೆ ನಿರ್ವಹಣೆ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಹೀಗಾಗಿ ಪಶ್ಚಿಮ ವಿಭಾಗ, ಸಂಚಾರ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಪತ್ರ ಬರೆದಿದ್ದಾರೆ. ತ್ವರಿತವಾಗಿ ದುರಸ್ತಿ ಕಾರ್ಯ ಪೂರ್ಣಗೊಳಿಸುವಂತೆ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಡೈರೆಕ್ಟರ್ ಗೆ ಪತ್ರ ಬರೆದಿದ್ದಾರೆ.
ಒಂದು ತಿಂಗಳಾದರೂ ಇನ್ನೂ ದುರಸ್ತಿ ಕಾರ್ಯ ಮುಗಿದಿಲ್ಲ ಹೀಗಾಗಿ ತುಮಕೂರು ರಸ್ತೆಯಲ್ಲಿ ಹೆಚ್ಚಿದ ಸಂಚಾರ ದಟ್ಟಣೆಯಿಂದ ಭಾರೀ ಸಮಸ್ಯೆಯಾಗ್ತಿದೆ. ಅಂಬ್ಯುಲೆನ್ಸ್ ಗಳು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ರೋಗಿಗಳಿಗೆ ತೊಂದರೆಯಾಗ್ತಿದೆ. ನಿತ್ಯ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಟ್ರಾಫಿಕ್​ನಲ್ಲಿ ಗಂಟೆಗಟ್ಟಲೆ ಸಿಲುಕುವ ಸವಾರರು ಪೊಲೀಸರ ಮೇಲೆ ಗಲಾಟೆ ಮಾಡ್ತಿದ್ದಾರೆ. ಸಾರ್ವಜನಿಕರಿಗೆ ಸಮಜಾಯಿಸಿ ಕೊಡುವುದು ಪೊಲೀಸರಿಗೆ ಕಷ್ಟವಾಗಿದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾದಯಾತ್ರೆಗೆ ಕಾಂಗ್ರೆಸ್ ಸಜ್ಜು