Publish Date: Mon, 15 Nov 2021 (14:48 IST)
Updated Date: Mon, 15 Nov 2021 (14:52 IST)
ರಾಜ್ಯ ಸರ್ಕಾರದ ಡಿನೋಟಿಫಿಕೇಷನ್ ನ ಪರಿಣಾಮವಾಗಿ ಬಿಡಿಎಯಿಂದ ಹಂಚಿಕೆಯಾಗಿದ್ದ ನಿವೇಷನಗಳನ್ನು ಕಳೆದುಕೊಂಡಿದ್ದ 307 ಮಂದಿಗೆ 13 ವರ್ಷಗಳೇ ಕಳೆದರೂ ಪರ್ಯಾಯ ನಿವೇಶನ ಇನ್ನೂ ದೊರೆತಿಲ್ಲ.
ಆದರೆ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಅರ್ಕಾವತಿ ಲೇಔಟ್ ನಲ್ಲಿ ನಿವೇಶನ ಕಳೆದುಕೊಂಡಿದ್ದ 307 ಮಂದಿಗೆ ಅದೇ ಲೇಔಟ್ ನಲ್ಲಿ ಹಾಗೂ ನಾಡಪ್ರಭು ಕೆಂಪೇಗೌಡ ಲೇಔಟ್ ನಲ್ಲಿ ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಪತ್ರ ಬಂದಿತ್ತು.2008-2009 ರಲ್ಲಿ ರಾಜ್ಯ ಸರ್ಕಾರ ಡಿನೋಟಿಫಿಕೇಷನ್ ಆದೇಶ ಹೊರಡಿಸಿದ ನಂತರ ಈ 307 ಮಂದಿ ನಿವೇಶನ ಕಳೆದುಕೊಂಡಿದ್ದರು. ಅಂದಿನಿಂದಲೂ ಬಿಡಿಎಯಿಂದ ನ್ಯಾಯ ಪಡೆಯಲು ಸಂತ್ರಸ್ತರು ಹೋರಾಡುತ್ತಿದ್ದಾರೆ.
ಮೂರು ತಿಂಗಳ ಹಿಂದೆ ಬಿಡಿಎ ಹಿರಿತನದ ಆಧಾರದಲ್ಲಿ ಪರ್ಯಾಯ ನಿವೇಶನ ಮಂಜೂರು ಮಾಡುತ್ತಿರುವುದಾಗಿ ಘೋಷಿಸಿತ್ತು.