Select Your Language

Notifications

webdunia
webdunia
webdunia
webdunia

ಬರೋಬ್ಬರಿ 40 ಸಾವಿರ ಕೋಟಿ ನಷ್ಟ!

ಬರೋಬ್ಬರಿ 40 ಸಾವಿರ ಕೋಟಿ ನಷ್ಟ!
ವಾಷಿಂಗ್ಟನ್ , ಬುಧವಾರ, 6 ಅಕ್ಟೋಬರ್ 2021 (08:28 IST)
ವಾಷಿಂಗ್ಟನ್  :  ಫೇಸ್ಬುಕ್, ವ್ಯಾಟ್ಸ್ಆಯಪ್, ಮತ್ತು ಇನ್ಸ್ಟಾಗ್ರಾಂಗಳು 6 ಗಂಟೆಗಳ ಕಾಲ ನಿಷ್ಟ್ರಿಯವಾದ ಕಾರಣದಿಂದಾಗಿ ಫೇಸ್ಬುಕ್ ಸಂಸ್ಥೆಯ ಸ್ಥಾಪಕ ಮಾರ್ಕ್ ಝುಕರ್ಬರ್ಗ್ಗೆ ಬರೋಬ್ಬರಿ 40 ಸಾವಿರ ಕೋಟಿ ರೂ. ನಷ್ಟವುಂಟಾಗಿದೆ!

ಸೋಮವಾರ ರಾತ್ರಿ 9ಗಂಟೆಯಿಂದ ಮಂಗಳವಾರ ಬೆಳಗಿನ ಜಾವ 4 ಗಂಟೆವರೆಗೆ ಈ ಮೂರು ಸಾಮಾಜಿಕ ಜಾಲತಾಣಗಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದವು. ಜಗತ್ತಿನ ಯಾವ ಭಾಗದಲ್ಲೂ ಇವು ಕಾರ್ಯಾಚರಣೆ ಮಾಡುತ್ತಿರಲಿಲ್ಲ.
ಅತ್ತ ಅಮೆರಿಕದಲ್ಲಿನ ಷೇರುಪೇಟೆಯಲ್ಲೂ ಫೇಸ್ಬುಕ್ ಷೇರುಗಳು ಶೇ.5ರಷ್ಟು ಕುಸಿತವಾದವು. ಹೀಗಾಗಿ ಕಳೆದ ವಾರವಷ್ಟೇ 140 ಬಿಲಿಯನ್ ಡಾಲರ್ ಆಸ್ತಿ ಹೊಂದಿ 5ನೇ ಸ್ಥಾನದಲ್ಲಿದ್ದ ಝುಕರ್ಬರ್ಗ್, ಸೋಮವಾರ ರಾತ್ರಿಯ ಕ್ರ್ಯಾಷ್ನಿಂದಾಗಿ 6ನೇ ಸ್ಥಾನಕ್ಕೆ ಕುಸಿದರು. ಈಗ ಅವರ ಒಟ್ಟು ಆಸ್ತಿ ಮೌಲ್ಯ 120 ಬಿಲಿಯನ್ ಡಾಲರ್ಗೆ ಕುಸಿತ ಕಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾಹನ ನೋಂದಣಿ ನವೀಕರಣಕ್ಕೆ 8 ಪಟ್ಟು ಹೆಚ್ಚು ಶುಲ್ಕ