ಬುರ್ಖಾ ಹಾಕಿಕೊಂಡು ಆರ್ ಎಸ್ಎಸ್ ನವರು ಗಲಾಟೆ ಮಾಡಿದ್ದಾರೆಂದ ಬಿಕೆ ಹರಿಪ್ರಸಾದ್: ತಾಕತ್ತಿದ್ದರೆ ಬ್ಯಾನ್ ಮಾಡಿ ಎಂದ ನೆಟ್ಟಿಗರು

Krishnaveni K
ಸೋಮವಾರ, 17 ಫೆಬ್ರವರಿ 2025 (12:16 IST)
ಬೆಂಗಳೂರು: ಬುರ್ಖಾ ಹಾಕಿಕೊಂಡು ಬಂದು ಆರ್ ಎಸ್ಎಸ್ ನವರು ಮೈಸೂರಿನಲ್ಲಿ ಗಲಾಟೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಗೆ ತಾಕತ್ತಿದ್ದರೆ ಬುರ್ಖಾ ಬ್ಯಾನ್ ಮಾಡಿ ಎಂದು ಕೆಲವು ನೆಟ್ಟಿಗರು ಸವಾಲು ಹಾಕಿದ್ದಾರೆ.

ಸೋಷಿಯಲ್ ಮೀಡಿಯಾ ಪುಟದಲ್ಲಿ ಧರ್ಮಗುರುಗಳ ಬಗ್ಗೆ ಅವಹೇಳನಕಾರೀ ಪೋಸ್ಟ್ ಮಾಡಿದ್ದಾರೆಂಬ ಕಾರಣಕ್ಕೆ ಮೈಸೂರಿನಲ್ಲಿ ಇತ್ತೀಚೆಗೆ ಉದಯಗಿರಿ ಪೊಲೀಸ್ ಠಾಣೆ ಮೇಲೆ ಮುಸ್ಲಿಂ ಯುವಕರ ಗುಂಪು ದಾಳಿ ಮಾಡಿತ್ತು.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಕೆ ಹರಿಪ್ರಸಾದ್ ನಿನ್ನೆ ಈ ಗಲಾಟೆ ಮಾಡಿದವರು ಆರ್ ಎಸ್ಎಸ್ ನವರು. ಅವರೇ ಬುರ್ಖಾ ಹಾಕಿಕೊಂಡು ಬಂದು ಗಲಾಟೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು. ಇದಕ್ಕೆ ಮೊದಲು ಕಾಂಗ್ರೆಸ್ ನಾಯಕ ಎಂ ಲಕ್ಷ್ಮಣ್ ಕೂಡಾ ಆರ್ ಎಸ್ಎಸ್ ಮೇಲೆ ಆರೋಪ ಮಾಡಿದ್ದರು.

ಇದೀಗ ಬಿಕೆ ಹರಿಪ್ರಸಾದ್ ಆರೋಪಕ್ಕೆ ಕೆಲವರು ಹಾಗಿದ್ದರೆ ಬುರ್ಖಾವನ್ನೇ ನಿಷೇಧಿಸಿ ಎಂದಿದ್ದಾರೆ. ಇನ್ನು ಕೆಲವರು ಅಲ್ಲಿ ಬುರ್ಖಾ ಹಾಕಿಕೊಂಡು ಎಷ್ಟು ಜನ ಬಂದಿದ್ದರು ಎಂದು ಸರಿಯಾಗಿ ತನಿಖೆ ನಡೆಸಿ. ಅದು ಬಿಟ್ಟು ಮಾಧ್ಯಮಗಳ ಮುಂದೆ ಸುಮ್ಮನೇ ಆರೋಪ ಮಾಡುವುದಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬದಲಾವಣೆ ಸಾಧ್ಯನೇ ಇಲ್ಲ: ಬಸನಗೌಡ ಪಾಟೀಲ್

ಬಿಗ್ ಶಾಕ್‌, ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಸಾವು

ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಆರ್.ಅಶೋಕ್

ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪಕ್ಕೆ ಕೋಲ್ಕತ್ತಾದಲ್ಲೂ ಶೇಕ್‌

ಮುನ್ಸೂಚನೆಯಂತೆ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ

ಮುಂದಿನ ಸುದ್ದಿ
Show comments