Select Your Language

Notifications

webdunia
webdunia
webdunia
webdunia

ನಿಮ್ಮ ಮಕ್ಕಳನ್ನು ಸೈನಿಕ ಶಾಲೆಗೆ ಸೇರಿಸಬೇಕಾ? ಇಲ್ಲಿದೆ ಅವಕಾಶ

ನಿಮ್ಮ ಮಕ್ಕಳನ್ನು ಸೈನಿಕ ಶಾಲೆಗೆ ಸೇರಿಸಬೇಕಾ? ಇಲ್ಲಿದೆ ಅವಕಾಶ
ಕಲಬುರಗಿ , ಶನಿವಾರ, 28 ಸೆಪ್ಟಂಬರ್ 2019 (18:38 IST)
ಸೈನಿಕ ಶಾಲೆಗಳಿಗೆ ಮಕ್ಕಳನ್ನು ಸೇರಬಯಸುವವರಿಗೆ ಶುಭ ಸುದ್ದಿ ಬಂದಿದೆ.

2020-21ನೇ ಸಾಲಿಗೆ ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಗಾಗಿ ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವ ಅವಧಿಯನ್ನು 2019ರ ಅಕ್ಟೋಬರ್ 10 ರವರೆಗೆ ವಿಸ್ತರಿಸಲಾಗಿದೆ. ಹೀಗಂತ ಕೊಡಗು ಸೈನಿಕ ಶಾಲೆಯ ಪ್ರಾಚಾರ್ಯರು ತಿಳಿಸಿದ್ದಾರೆ.

ಕೊಡಗು ಸೈನಿಕ ಶಾಲೆಯಲ್ಲಿ 6ನೇ ಮತ್ತು 9ನೇ ತರಗತಿಗಳಿಗೆ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶ ಪಡೆಯಲಿಚ್ಛಿಸುವ ವಿದ್ಯಾರ್ಥಿಗಳು ಸೈನಿಕ ಶಾಲೆಯ www.sainikschooladmission.in ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಮೇಲ್ಕಂಡ ದಿನಾಂಕದೊಳಗಾಗಿ ನೋಂದಣಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ವೆಬ್‍ಸೈಟ್‍ನ್ನು ಅಥವಾ ಕೊಡಗು ಸೈನಿಕ ಶಾಲೆಯ ದೂರವಾಣಿ ಸಂಖ್ಯೆ 08276-278963ಗೆ ಸಂಪರ್ಕಿಸಬೇಕು.



Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಜಿಲ್ಲೆ ರಚನೆಗೆ ಮುಂದಾದ ರಾಜ್ಯ ಸರಕಾರ