Select Your Language

Notifications

webdunia
webdunia
webdunia
webdunia

ನೈಸರ್ಗಿಕ ಮಾವು ‘ಹಾವೇರಿ ಆಲ್ಫಾನ್ಸೊ’ಗೆ ಭಾರಿ ಬೇಡಿಕೆ

ನೈಸರ್ಗಿಕ ಮಾವು ‘ಹಾವೇರಿ ಆಲ್ಫಾನ್ಸೊ’ಗೆ ಭಾರಿ ಬೇಡಿಕೆ
ಹಾವೇರಿ , ಭಾನುವಾರ, 10 ಮೇ 2020 (13:40 IST)
ಲಾಕ್ ಡೌನ್ ನಡುವೆಯೂ ನೈಸರ್ಗಿಕ ವಿಧಾನದಲ್ಲಿ ಮಾಗಿಸಿದ ‘ಹಾವೇರಿ ಆಲ್ಫಾನ್ಸೊ’ ಮಾವಿನ ಹಣ್ಣುಗಳಿಗೆ ಗ್ರಾಹಕರಿಂದ ಉತ್ತಮ ಬೇಡಿಕೆ ಬರುತ್ತಿದೆ.

ಹಾವೇರಿ ಜಿಲ್ಲೆಯ ರೈತರು ಬೆಳೆದ 1,950 ಮೆಟ್ರಿಕ್‌ ಟನ್‌ ಮಾವುಗಳನ್ನು ತೋಟಗಾರಿಕೆ ಇಲಾಖೆ ವತಿಯಿಂದ ಲಾಕ್‌ಡೌನ್‌ ಅವಧಿಯಲ್ಲಿ ಗುಜರಾತ್‌, ಪುಣೆ, ಗೋವಾ, ಕಾರವಾರ, ಉಡುಪಿ, ಬೆಂಗಳೂರು ಮಾರುಕಟ್ಟೆಗೆ ಕಳುಹಿಸಿಕೊಟ್ಟಿದ್ದೇವೆ. ನೈಸರ್ಗಿಕ ವಿಧಾನದಲ್ಲಿ ಮಾಗಿಸಿದ ‘ಹಾವೇರಿ ಆಲ್ಫಾನ್ಸೊ’ಮಾವಿನ ಹಣ್ಣುಗಳಿಗೆ ಗ್ರಾಹಕರಿಂದ ಉತ್ತಮ ಬೇಡಿಕೆ ಬರುತ್ತಿದೆ ಎಂದು ಹಾವೇರಿ ತೋಟಗಾರಿಕೆ ಉಪನಿರ್ದೇಶಕ ಎಲ್‌. ಪ್ರದೀಪ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ, ತಾಲ್ಲೂಕು ತೋಟಗಾರಿಕಾ ಕಚೇರಿ ಮತ್ತು ತೋಟದ ಯಲ್ಲಾಪುರ ರಸ್ತೆಯಲ್ಲಿ ಮಳಿಗೆಗಳನ್ನು ತೆರೆದಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದಿದ್ದಾರೆ.

ಸಂಸ್ಕರಣಾ ಘಟಕ ಆರಂಭಕ್ಕೆ ಚಿಂತನೆ : ಹಾವೇರಿ ಜಿಲ್ಲೆಯಲ್ಲಿ 5,600 ಹೆಕ್ಟೇರ್‌ನಲ್ಲಿ ಸುಮಾರು 48 ಸಾವಿರ ಮೆಟ್ರಿಕ್‌ ಟನ್‌ ಮಾವು ಉತ್ಪನ್ನ ದೊರೆಯುತ್ತದೆ. ಹೀಗಾಗಿ ‘ಮಾವು ಸಂಸ್ಕರಣಾ ಘಟಕ’ ತೆರೆದು, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಚಿಂತನೆಯಿದೆ. ಇದರಿಂದ ಮಾರುಕಟ್ಟೆಯ ಲಾಭ ರೈತರಿಗೆ ನೇರವಾಗಿ ತಲುಪುತ್ತದೆ. ಹೀಗಾಗಿ ರೈತರು ಒಗ್ಗಟ್ಟಾಗಿ ರೈತ ಉತ್ಪಾದಕರ ಕಂಪನಿಗಳ ಮೂಲಕ ವ್ಯವಹರಿಸಬೇಕು ಎಂದು ಮನವಿ ಮಾಡುತ್ತೇನೆ ಅವರು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ತಬ್ಲಿಘಿ ಮರೆಯುವ ಮುನ್ನವೇ ಈಗ ಅಜ್ಮೇರ್ ಕಾಟ ಶುರು