Publish Date: Sun, 12 Jan 2020 (21:39 IST)
Updated Date: Sun, 12 Jan 2020 (21:41 IST)
ಬಿಜೆಪಿ ನಾಯಕರೊಬ್ಬರು ನಾಥೂರಾಮ್ ಗೋಡ್ಸೆ ಪರವಾಗಿ ಬ್ಯಾಟಿಂಗ್ ಮಾಡಿರೋದು ಬಿಜೆಪಿ ಮುಖಂಡರನ್ನು ಪೇಚಿಗೆ ಸಿಲುಕಿಸಿದೆ.
ಸುದ್ದಿವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಜೆಪಿಯ ಅಮಿತಾಬ್ ಸಿನ್ಹಾ ಅವರು ನಾಥೂರಾಮ್ ಗೋಡ್ಸೆಯನ್ನು ವಿರೋಧ ಮಾಡೋದಿಲ್ಲ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಮ್ಯುನಿಸ್ಟ್ ಪಾರ್ಟಿಯ ಕನ್ಹಯ್ಯ ಕುಮಾರ್ ಜೊತೆಯಲ್ಲೇ ಚರ್ಚೆಯಲ್ಲಿ ಬಿಜೆಪಿಯ ಮುಖಂಡ ಭಾಗವಹಿಸಿದ್ದರು. ಸಿನ್ಹಾ ಹೇಳಿಕೆಯನ್ನು ಕನ್ಹಯ್ಯ ಕುಮಾರ್ ಉಗ್ರವಾಗಿ ಖಂಡಿಸಿದ್ದಾರೆ.