Publish Date: Sat, 29 Apr 2023 (09:09 IST)
Updated Date: Sat, 29 Apr 2023 (09:13 IST)
ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಮೆಗಾ ರೋಡ್ ಶೋ ನಡೆಸಲಿದ್ದಾರೆ. ಬರೋಬ್ಬರಿ 5.5 ಕಿ.ಮೀ ಉದ್ದದ ರೋಡ್ ಶೋ ಮಾಡಲಿದ್ದಾರೆ.
ರೋಡ್ ಶೋಗೆ ಯಶವಂತಪುರದಲ್ಲಿ ಭರ್ಜರಿ ತಯಾರಿ ಮಾಡಿಕೊಳ್ಳಲಾಗಿದೆ. ನೈಸ್ ಜಂಕ್ಷನ್ನಿಂದ ಸುಮನಹಳ್ಳಿ ಬ್ರಿಡ್ಜ್ ತನಕ ಮೋದಿ ರೋಡ್ ಶೋ ಇರಲಿದೆ.
ಯಶವಂತಪುರ, ಹೆಬ್ಬಾಳ, ಮಲ್ಲೇಶ್ವರಂ, ಮಹಾಲಕ್ಷ್ಮಿಲೇಔಟ್, ದಾಸರಹಳ್ಳಿ, ಆರ್.ಆರ್. ನಗರ, ಯಲಹಂಕ, ಬ್ಯಾಟರಾಯನಪುರ, ಪುಲಿಕೇಶಿನಗರ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.
ಒಟ್ಟು ಒಂಭತ್ತು ಕ್ಷೇತ್ರಗಳಿಂದ 1.5 ಲಕ್ಷಕ್ಕೂ ಹೆಚ್ಚು ಜನ ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಕೋಲಾರ, ಹಾಸನ, ರಾಮನಗರ ಮೈಸೂರಿನಲ್ಲಿ ಮೋದಿ ಪ್ರಚಾರ ನಡೆಸಲಿದ್ದಾರೆ.