Publish Date: Fri, 18 Oct 2019 (15:33 IST)
Updated Date: Fri, 18 Oct 2019 (15:34 IST)
ಪ್ರಧಾನಿ ನರೇಂದ್ರ ಮೋದಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಇದೆ. ಆದರೂ ಮೋದಿ ಮೇಲೆ ಇವರ ಕೆಂಗಣ್ಣು ಇದ್ದೇ ಇದೆ ಅಂತ ಸಚಿವ ಬಿ.ಶ್ರೀರಾಮುಲು ಹೊಸ ಬಾಂಬ್ ಸಿಡಿಸಿದ್ದಾರೆ.
ಚಿತ್ರದುರ್ಗದಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ವಿಜಯಪುರದಲ್ಲಿ ಬಯಲಲ್ಲೇ ಮಹಿಳೆಯ ಹೆರಿಗೆ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಆಸ್ಪತ್ರೆ ಸಿಬ್ಬಂದಿಯ ಶಿಫ್ಟ್ ಬದಲಾವಣೆ ವೇಳೆ ಘಟನೆ ನಡೆದಿದೆ ಎಂದ್ರು.
ನಿರ್ಲಕ್ಷ ವಹಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಅಂದ್ರು. ಇನ್ನು, ಜಿಲ್ಲಾಸ್ಪತ್ರೆ ವಾಸ್ತವ್ಯದ ಮೂಲಕ ಇಲಾಖೆಯ ಸುಧಾರಣೆಗೆ ಯತ್ನ ನಡೆದಿದೆ. ಒಂದೇ ದಿನಕ್ಕೆ ಎಲ್ಲವೂ ಸುಧಾರಣೆ ಆಗುತ್ತದೆಂಬುದಿಲ್ಲ.
ಆರೋಗ್ಯ ಸಚಿವರ ವಾಸ್ತವ್ಯದಿಂದ ಆರೋಗ್ಯ ಇಲಾಖೆ ಸುಧಾರಣೆ ಆಗುತ್ತದೆ ಎಂದ್ರು.
ಪ್ರಧಾನಿಗೆ ಗಂಡಾಂತರ ಇದೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಪ್ರಧಾನಿ ಮೋದಿ ಮೇಲೆ ಕೆಲವರ ಕೆಂಗಣ್ಣು ಇದ್ದೇ ಇದೆ. ಆದರೆ ಮೋದಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಇದೆ ಎಂದಿದ್ದಾರೆ.