Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ಮತ್ತು ದೇವೇಗೌಡರದು ಜನ್ಮಜನ್ಮದ ಅನುಬಂಧ: ವಿಜಯೇಂದ್ರ ಬಣ್ಣನೆ

Prime Minister Narendra Modi, Former Prime Minister HD Deve Gowda, BJP State President B.Y. Vijayendra

Sampriya

, ಶನಿವಾರ, 6 ಸೆಪ್ಟಂಬರ್ 2025 (20:16 IST)
Photo Credit X
ಬೆಂಗಳೂರು: ಇಳಿವಯಸ್ಸಿನಲ್ಲೂ ದೇವೇಗೌಡ ಅವರು ದೇಶದ ಬಗ್ಗೆ ಇಟ್ಟಿರುವ ಕಾಳಜಿ, ನರೇಂದ್ರ ಮೋದಿ ಅವರ ನಾಯಕತ್ವದ ಬಗ್ಗೆ ಅವರು ಇಟ್ಟಿರುವ ವಿಶ್ವಾಸ- ಇವೆಲ್ಲವೂ ಯುವರಾಜಕಾರಣಿಗಳು, ನಮ್ಮಂಥವರಿಗೆ ಮಾದರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ದೇವೇಗೌಡ ವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಮತ್ತು ಅವರಿಗೆ ಅಭಿನಂದನೆ ಸಲ್ಲಿಸಲು ಬಯಸಿದ್ದೆ. ಅವರ ಮಾರ್ಗದರ್ಶನ ಪಡೆಯಲು ನಾನು ಮತ್ತು ಪಕ್ಷದ ಹಿರಿಯ ಶಾಸಕರು ಬಂದು ಅವರನ್ನು ಭೇಟಿ ಮಾಡಿದ್ದೇವೆ ಎಂದು ತಿಳಿಸಿದರು. 

ಭಾರತವನ್ನು ಸದೃಢವಾಗಿ ಮುನ್ನಡೆಸಲು ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ ಎಂದು ಅವರು ತಿಳಿಸಿದ್ದಾರೆ. ಇನ್ಯಾರಿಂದಲೂ ಇದು ಸಾಧ್ಯವಿಲ್ಲ. ಮೋದಿ ಅವರು ಸವಾಲನ್ನು ಸ್ವೀಕರಿಸಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಅವರೇ ಇಂಥ ಬಲಿಷ್ಠ ಭಾರತ ಮುನ್ನಡೆಸಲು ಸಾಧ್ಯ ಎಂಬ ಮಾತನ್ನೂ ಅವರು ಉಲ್ಲೇಖಿಸಿದರು ಎಂದು ತಿಳಿಸಿದರು.

ನರೇಂದ್ರ ಮೋದಿ ಅವರ ಮತ್ತು ದೇವೇಗೌಡ ಅವರದು ಜನ್ಮಜನ್ಮದ ಅನುಬಂಧ ಎಂಬ ಮಾತನ್ನೂ ಉಲ್ಲೇಖಿಸಿದ್ದಾರೆ. ಟ್ರಂಪ್ ಸವಾಲು ಒಡ್ಡಿದಾಗ 48 ಗಂಟೆಗಳಲ್ಲಿ ಯಾವ ರೀತಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು ಎಂಬ ಕುರಿತು ಕೂಡ ದೇವೇಗೌಡರು ಹೇಳಿದ್ದಾರೆ. ಅವರೊಬ್ಬ ಮಾದರಿ ರಾಜಕಾರಣಿ ಎಂದು ಮೆಚ್ಚುಗೆ ಸೂಚಿಸಿದರು.

ಒಬ್ಬ ಹಿರಿಯ ಹಾಗೂ ಮುತ್ಸದ್ಧಿ ರಾಜಕಾರಣಿ, ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದೇನೆ. ಈಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರು, ಶಾಂಘೈ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ತದನಂತರ ದೇವೇಗೌಡರು ಪ್ರಧಾನಿಯವರಿಗೆ ಒಂದು ಪತ್ರ ಬರೆದು ಅವರಿಗೆ ಅಭಿನಂದನೆ ಸಲ್ಲಿಸಿದ್ದರು ಎಂದು ವಿವರಿಸಿದರು.

ಜೆಡಿಎಸ್- ನಮ್ಮ ನಡುವೆ ಸಮನ್ವಯದ ಕೊರತೆ ಇಲ್ಲ ಎಂದು ಪ್ರಶ್ನೆಗೆ ಅವರು ಉತ್ತರ ಕೊಟ್ಟರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದು, ರೈತರನ್ನು ಮರೆತಿದೆ. ಭೀಕರ ಮಳೆಯಿಂದ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ ಎಂದರು.

ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ.ಸಿ.ಎನ್. ಅಶ್ವಥನಾರಾಯಣ್, ಶಾಸಕರಾದ ಸುರೇಶ್ ಗೌಡ, ಸಿ.ಕೆ.ರಾಮಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಪ್ರಕೋಷ್ಠಗಳ ರಾಜ್ಯ ಸಂಯೋಜಕ ದತ್ತಾತ್ರಿ, ಜೆಡಿಎಸ್ ಮುಖಂಡರಾದ ಜವರಾಯೇಗೌಡ ಹಾಗೂ ರಮೇಶ್ ಪ್ರಮುಖರು ಉಪಸ್ಥಿತರಿದ್ದರು

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನಯ್ಯ ತಂದ ಬುರುಡೆ ಮೂಲ ತನಿಖೆ: ಸೌಜನ್ಯ ಮಾವ ವಿಠಲ್‌ ಗೌಡಗೆ ಡವಡವ