Select Your Language

Notifications

webdunia
webdunia
webdunia
webdunia

ಚಿನ್ನಯ್ಯ ತಂದ ಬುರುಡೆ ಮೂಲ ತನಿಖೆ: ಸೌಜನ್ಯ ಮಾವ ವಿಠಲ್‌ ಗೌಡಗೆ ಡವಡವ

Dharmasthala

Sampriya

ಬೆಳ್ತಂಗಡಿ , ಶನಿವಾರ, 6 ಸೆಪ್ಟಂಬರ್ 2025 (20:05 IST)
ಬೆಳ್ತಂಗಡಿ: ಧರ್ಮಸ್ಥಳದ ಬುರುಡೆ ಪ್ರಕರಣ ಸಂಬಂಧ ಇದೀಗ ಸ್ಪೋಟಕ ತಿರುವು ಪಡೆದುಕೊಂಡಿದೆ. ಚಿನ್ನಯ್ಯ ತಂದ ಬುರುಡೆಯ ಮೂಲ ಕೆದಕಲು ಹೋದ ಎಸ್‌ಐಟಿ ಅಧಿಕಾರಿಗಳಿಗೆ ಮತ್ತೊಂದು ಸ್ಫೋಟಕ ಮಾಹಿತಿ ದೊರಕಿದೆ.

ಈ ಪ್ರಕರಣದಲ್ಲಿ ಬುರುಡೆಯನ್ನು ಮೊದಲು ಕಾಡಿನಿಂದ ಗಿರೀಶ್ ಮಟ್ಟಣ್ಣವರ್‌ಗೆ ನೀಡಿದ್ದು ಪಾಂಗಳದ ಸೌಜನ್ಯ ಮಾವ ವಿಠಲ್ ಗೌಡ ಎಂದು ಎಸ್.ಐ.ಟಿ ವಿಚಾರಣೆಯಲ್ಲಿ ಬಯಲಾಗಿದೆ. 

ವಿಠಲ ಗೌಡನನ್ನು ವಿಚಾರಣೆ ನಡೆಸಿದ ಎಸ್‌ಐಟಿ ಅಧಿಕಾರಿಗಳು ಇಂದು ಧರ್ಮಸ್ಥಳ ಗ್ರಾಮದ ಬಂಗ್ಲಗುಡ್ಡೆ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದಾರೆ.  

ಯಾವುದೇ ಕ್ಷಣದಲ್ಲಿ ವಿಠಲ ಗೌಡನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸುವ ಸಾಧ್ಯತೆಯಿದೆ. ಈ ಮಧ್ಯೆ ಎಸ್‌ಐಟಿ ವಶದಲ್ಲಿ ಚಿನ್ನಯ್ಯನಿಗೆ ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಜೈಲಿಗೆ ರವಾನಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮುಂದೊಂದು ದಿನ ಭಾರತ, ಪಾಕ್ ಆಗಲಿದೆ: ಹಿಂದೂಗಳಿಗೆ ಎಚ್ಚರಿಕೆ ನೀಡಿದ ಕಲ್ಲಡ್ಕ ಭಟ್