Publish Date: Sat, 06 May 2023 (14:43 IST)
Updated Date: Sat, 06 May 2023 (15:46 IST)
ಇಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಅದ್ದೂರಿಯಾಗಿ ನಡೆದಿದ್ದು, ರಸ್ತೆಯೆಲ್ಲಾ ಕೇಸರಿಮಯವಾಗಿತ್ತು.. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೊರಡಿಸಿದ್ದ ಬಜರಂಗ ದಳದ ಬ್ಯಾನ್ ವಿಚಾರವೇ ಬಿಜೆಪಿಗೆ ದೊಡ್ಡ ಅಸ್ತ್ರವಾಗಿದ್ದು, ಇದು ರೋಡ್ ಶೋನಲ್ಲೂ ಅನುರಣಿಸಿತು. ಕಾಡುಮಲ್ಲೇಶ್ವರ ದೇವಸ್ಥಾನದ ಬಳಿ ಸಾವಿರಾರು ಕಾರ್ಯಕರ್ತರು ಆಂಜನೇಯನ ಮುಖವಾಡ ಧರಿಸಿ ಜೈ ಭಜರಂಗಿ.. ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ರು..ಈ ವೇಳೆ ರೋಡ್ ಶೋನಲ್ಲಿ ಹನುಮಂತನ ಮುಖವಾಡಗಳನ್ನು ಧರಿಸಿದ ಹಲವಾರು ಜನರು ಭಾಗವಹಿಸಿದ್ದರು. ಹಿಂದುತ್ವ ಸಂಘಟನೆಯಾದ ಬಜರಂಗದಳವನ್ನು ನಿಷೇಧಿಸುವಂತೆ ಸೂಚಿಸಿದ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ವಿರೋಧಿಸಲು ಬಿಜೆಪಿ ಕಾರ್ಯಕರ್ತರು ಭಗವಾನ್ ಹನುಮಂತನ ಮುಖವಾಡಗಳನ್ನು ಧರಿಸಿದ್ದರು.