Select Your Language

Notifications

webdunia
webdunia
webdunia
webdunia

ಸಿಲಿಕಾನ್​ ಸಿಟಿಯಲ್ಲಿ ‘ನಮೋ’ ರೋಡ್​ ಶೋ

ಸಿಲಿಕಾನ್​ ಸಿಟಿಯಲ್ಲಿ ‘ನಮೋ’ ರೋಡ್​ ಶೋ
bangalore , ಶನಿವಾರ, 6 ಮೇ 2023 (14:00 IST)
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈ ನಡುವಲ್ಲೇ ಬೆಂಗಳೂರಿನಲ್ಲಿರುವ ಮತದಾರರ ಮನಗೆಲ್ಲಲು ಪ್ರಧಾನಮಂತ್ರಿ ನರೇಂದ್ರ ಮೋದಿ ನಗರದಲ್ಲಿ ರೋಡ್ ಶೋ ನಡೆಸಿದ್ದಾರೆ.. ನಗರದ ಸೋಮೇಶ್ವರ ಸಭಾಭವನದಿಂದ ಮೋದಿ ರೋಡ್ ಶೋ ಆರಂಭವಾಗಿದ್ದು, ಪ್ರಧಾನಿ ಮೋದಿ ಜೊತೆಗೆ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಸಾಥ್ ನೀಡಿದ್ದಾರೆ. ಮೋದಿಯವರ ರೋಡ್ ಶೋ ವೇಳೆ ಮಾರ್ಗದುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಹೂವಿನ ಮಳೆ ಸುರಿಸಿದ್ದು, ಮೋದಿ ಪರ ಜೈಕಾರ ಕೂಗಿದ್ರು. ಸುಮಾರು 26 ಕಿ.ಮೀ ದೂರ ಮೋದಿ ರೋಡ್​ ಶೋ ಸಾಗಿತು. ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ನೋಡಲು ಭೂತಾನ್, ಮಾಲ್ಡೀವ್ಸ್, ನೇಪಾಳದಿಂದ ಅಧಿಕಾರಿಗಳು ಆಗಮಿಸಿದ್ರು. ಮಲ್ಲೇಶ್ವರದ ಸರ್ಕಲ್ ಮಾರಮ್ಮ ದೇಗುಲ ಬಳಿ ರೋಡ್​ ಶೋ ಅಂತ್ಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲಿಂಗ ಸಂಬಂಧ ಕಾನೂನುಬದ್ಧಗೊಳಿಸಿದರೆ ಅಸ್ವಸ್ಥತೆ ಹೆಚ್ಚಳ !