ಬೆಂಗಳೂರು: ನ್ಯೂ ಇಯರ್ ಪಾರ್ಟಿಯಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋಗೂ ಲಾಭವೋ ಲಾಭ. ನಿನ್ನೆ ಒಂದೇ ದಿನ ಭರ್ಜರಿ ಲಾಭ ಗಳಿಸಿದೆ.
ಹೊಸ ವರ್ಷದ ಆಚರಣೆ ನಿಮಿತ್ತ ಅಬಕಾರಿ ಇಲಾಖೆ ಒಂದೇ ದಿನ 300 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿ ದಾಖಲೆ ಮಾಡಿತ್ತು. ಎರಡು ದಿನಗಳಲ್ಲಿ 400 ಕೋಟಿಗೂ ಅಧಿಕ ಆದಾಯ ಬಂದಿತ್ತು. ಈಗ ನಮ್ಮ ಮೆಟ್ರೂ ಕೂಡಾ ಭರ್ಜರಿ ಲಾಭ ಮಾಡಿಕೊಂಡ ಸುದ್ದಿ ಬಂದಿದೆ.
ಹೊಸ ವರ್ಷಾಚರಣೆ ನಿಮಿತ್ತ ನಮ್ಮ ಮೆಟ್ರೋ ಸೇವೆಯನ್ನು ನಿನ್ನೆ ತಡರಾತ್ರಿಯವರೆಗೂ ವಿಸ್ತರಿಸಲಾಗಿತ್ತು. ತಡರಾತ್ರಿ ಸಾಕಷ್ಟು ಜನ ಮೆಟ್ರೋದಲ್ಲಿ ಸಂಚಾರ ಮಾಡಿದ್ದರು. ಇದರ ಪರಿಣಾಮ ನಮ್ಮ ಮೆಟ್ರೋ ಒಂದೇ ದಿನ 2 ಕೋಟಿ 72 ಲಕ್ಷ ರೂ. ಸಂಪಾದನೆ ಮಾಡಿದೆ.
ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಬೆಳಿಗ್ಗೆ 5.45 ರಿಂದ ತಡರಾತ್ರಿ 2.45 ರವರೆಗೆ ಮೆಟ್ರೋ ಸಂಚಾರ ಮಾಡಿತ್ತು. ನಿನ್ನೆ ಒಂದೇ ದಿನ 10 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚಾರ ನಡೆಸಿದ್ದರು. ಪರಿಣಾಮ ಭಾರೀ ಲಾಭ ಗಳಿಸಿದೆ.